More

    ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾಗೆ ವೈ ಕ್ಯಾಟಗರಿ ಭದ್ರತೆ

    ನವದೆಹಲಿ: ಭಾರತದ ಕರೊನಾ ಲಸಿಕಾ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಸೀರಮ್​ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದ (ಎಸ್​ಐಐ) ಸಿಇಒ ಅದಾರ್ ಪೂನಾವಾಲಾ ಅವರಿಗೆ ಕೇಂದ್ರ ಸರ್ಕಾರ ವೈ ಕ್ಯಾಟಗರಿ ಸೆಕ್ಯುರಿಟಿ ನೀಡಿದೆ. ಇಬ್ಬರು ಕಮ್ಯಾಂಡೋಗಳು ಮತ್ತು ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ 11 ಜನ ಭದ್ರತಾ ಸಿಬ್ಬಂದಿಯನ್ನೊಳಗೊಂಡ ಭದ್ರತೆಯನ್ನು ಒದಗಿಸಬೇಕೆಂದು ಇಂದು ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

    ಅದಾರ್​ ಪೂನಾವಾಲಾ ಅವರ ಎಸ್​ಐಐ ಇಂಗ್ಲೆಂಡಿನ ಆಸ್ತ್ರಾಜೆನೆಕಾ ಮತ್ತು ಆಕ್ಸ್​ಫರ್ಡ್ ಯೂನಿವರ್ಸಿಟಿ ರೂಪಿಸಿರುವ ಕರೊನಾ ಲಸಿಕೆಯನ್ನು ಕೋವಿಶೀಲ್ಡ್​ ಹೆಸರಲ್ಲಿ ಭಾರತದಲ್ಲಿ ಉತ್ಪಾದಿಸುತ್ತಿದೆ. ಮೇ 1 ರಿಂದ ಲಸಿಕಾ ಅಭಿಯಾನದ ಮೂರನೇ ಚರಣ ಆರಂಭವಾಗಲಿದ್ದು, 18 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಲಸಿಕೆ ಪಡೆಯುವ ಅವಕಾಶ ಕಲ್ಪಿಸಲಾಗುವುದು. (ಏಜೆನ್ಸೀಸ್)

    ಕುಂಭ ಮೇಳದ ಬೆನ್ನಲ್ಲೇ ಚಾರ್​​ ಧಾಮ್​ ಯಾತ್ರೆಗೆ ಸಜ್ಜಾದ ಉತ್ತರಾಖಂಡ

    ಕೋವಿಶೀಲ್ಡ್​ ಬೆಲೆ ಕಡಿತ : ಒಂದು ಡೋಸ್​ಗೆ 300 ರೂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts