More

    ಭಾರತದ ಅಗತ್ಯ ಪೂರೈಸಲು ಓವರ್​ಟೈಮ್ : ಚೀನಾ ಅಂಬಾಸಿಡರ್ ಭರವಸೆ

    ನವದೆಹಲಿ : ಕರೊನಾ ಎರಡನೇ ಅಲೆಯ ಹೊಡೆತಕ್ಕೆ ತತ್ತರಿಸುತ್ತಿರುವ ಭಾರತದಲ್ಲಿ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಅವಶ್ಯಕವಾದ ಆಕ್ಸಿಜನ್​ನ ಕೊರತೆ ತಲೆದೋರಿದೆ. ಈ ಸಂದರ್ಭದಲ್ಲಿ ಅಮೆರಿಕ, ಸೌದಿ ಅರೇಬಿಯಾ, ಸಿಂಗಪೂರ್ ಮೊದಲಾದ ರಾಷ್ಟ್ರಗಳು ಆಕ್ಸಿಜನ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್​ನಂತಹ ಉಪಕರಣಗಳನ್ನು ಸಹಾಯದ ರೂಪದಲ್ಲಿ ಭಾರತಕ್ಕೆ ಕಳುಹಿಸಿವೆ.

    ಇದೀಗ ಚೀನಾ ಕೂಡ ಭಾರತ ಆರ್ಡರ್ ನೀಡಿರುವ ಆಕ್ಸಿಜನ್ ಕಾನ್ಸಂಟ್ರೇಟರ್​ಗಳ ಉತ್ಪಾದನೆಯನ್ನು ಪೂರೈಸಲು ತನ್ನ ವೈದ್ಯಕೀಯ ಕ್ಷೇತ್ರದ ಉತ್ಪಾದಕರು ಓವರ್​ಟೈಮ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ.

    ಚೀನಾದ ಅಂಬಾಸಿಡರ್​ ಸುನ್ ವೀಡಾಂಗ್​ ಅವರು, “ಇತ್ತೀಚಿನ ದಿನಗಳಲ್ಲಿ ಕನಿಷ್ಠ 25,000 ಆಕ್ಸಿಜನ್ ಕಾನ್ಸಂಟ್ರೇಟರ್​​ಗಳ ಆರ್ಡರ್ ಬಂದಿದೆ. ಭಾರತದ ಆರ್ಡರ್​ಗಳ ಮೇಲೆ ಚೀನಾದ ಮೆಡಿಕಲ್​ ಸಪ್ಲೈಯರ್​ಗಳು ಓವರ್​ಟೈಮ್ ಕೆಲಸ ಮಾಡುತ್ತಿದ್ದಾರೆ. ಮೆಡಿಕಲ್​ ಸಪ್ಲೈಗಳಿಗೆ ಕಾರ್ಗೋ ಪ್ಲೇನ್​ಗಳನ್ನು ಕಳುಹಿಸುವ ಯೋಜನೆ ಇದೆ. ಚೀನಾದ ಕಸ್ಟಮ್ಸ್​ ವಿಭಾಗ ಅಗತ್ಯ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡಲಿದೆ” ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    ಸೀರಮ್​ ಇನ್ಸ್​ಟಿಟ್ಯೂಟ್ ಸಿಇಒ ಅದಾರ್ ಪೂನಾವಾಲಾಗೆ ವೈ ಕ್ಯಾಟಗರಿ ಭದ್ರತೆ

    ಲಾಕ್​ಡೌನ್​ ವೇಳೆ ಓಡಾಡಲು ಪಾಸ್​ ನೀಡುತ್ತಿಲ್ಲ : ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts