

ಬೆಂಗಳೂರು : ಇಂದಿನಿಂದ ಮೇ 12 ರವರೆಗೆ ಕರ್ನಾಟಕ ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಸಂದರ್ಭದಲ್ಲಿ ಓಡಾಡಲು, ಬೆಂಗಳೂರು ನಗರ ಪೊಲೀಸರು ಯಾವುದೇ ಉದ್ದೇಶಕ್ಕೆ ಯಾವುದೇ ಪಾಸ್ಗಳನ್ನು ವಿತರಿಸುತ್ತಿಲ್ಲ ಎಂದು ನಗರ ಪೊಲೀಸ್ ಆಯುಕ್ತರ ಕಛೇರಿ ಸ್ಪಷ್ಟೀಕರಣ ನೀಡಿದೆ.
ಸರ್ಕಾರದ ಆದೇಶದಲ್ಲಿ ವಿನಾಯಿತಿ ನೀಡಲಾಗಿರುವ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ಸ್ಥಳಗಳಿಗೆ ಕರ್ತವ್ಯದ ಮೇಲೆ ಸಂಚರಿಸಬಹುದಾಗಿದೆ. ಈ ಸಂದರ್ಭದಲ್ಲಿ ತಮ್ಮ ಪ್ರಯಾಣವನ್ನು ಸಮರ್ಥಿಸುವ ಗುರುತಿನ ಚೀಟಿ ಅಥವಾ ಇತರ ದಾಖಲಾತಿಗಳನ್ನು ಜೊತೆಯಲ್ಲಿರಿಸಿಕೊಂಡು ಪ್ರಯಾಣಿಸಬೇಕು. ದಾರಿಯಲ್ಲಿ ಕರ್ತವ್ಯನಿರತ ಪೊಲೀಸರು ಪರಿಶೀಲಿಸಲು ಇಚ್ಛಿಸಿದಲ್ಲಿ ಈ ದಾಖಲಾತಿಗಳನ್ನು ಹಾಜರುಪಡಿಸಬೇಕು ಎನ್ನಲಾಗಿದೆ.