More

    ಸರ್ಕಾರದ ಎಚ್ಚರಿಕೆ ಘಂಟೆ : ಮನೆಯಲ್ಲೂ ಮಾಸ್ಕ್​ ತೊಡಬೇಕಾದ ಸಮಯ ಬಂದಿದೆ !

    ನವದೆಹಲಿ : ಪ್ರಸ್ತುತ ಕರೊನಾ ಸನ್ನಿವೇಶದಲ್ಲಿ, ಮನೆಯೊಳಗೆ ಇದ್ದಾಗಲೂ ಜನರು ಮಾಸ್ಕ್​ ತೊಡುವ ಸಮಯ ಬಂದಿದೆ ಎಂದು ಕೇಂದ್ರ ಸರ್ಕಾರದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಹೇಳಿದ್ದಾರೆ. ಮನೆಯಲ್ಲೇ ಇರಿ, ಅನಗತ್ಯವಾಗಿ ಮನೆಯಿಂದ ಹೊರಗೆ ಹೆಜ್ಜೆ ಹಾಕಬೇಡಿ, ಮನೆಗೆ ಯಾರನ್ನೂ ಆಹ್ವಾನಿಸಬೇಡಿ – ಇವು ಅವರ ಇತರ ಸಲಹೆಗಳು.

    “ಈವರೆಗೆ ಹೊರಗೆ ಹೋಗುವಾಗ ಮಾಸ್ಕ್ ತೊಡಲು ಹೇಳುತ್ತಿದ್ದೆವು. ಆದರೆ ಸೋಂಕು ಹರಡಿರುವುದರಿಂದ ಮನೆಯಲ್ಲೂ ಧರಿಸಬೇಕು” ಎಂದು ಇಂದು ಪತ್ರಿಕಾ ಗೋಷ್ಠಿಯಲ್ಲಿ ಡಾ. ಪೌಲ್ ಹೇಳಿದರು. “ಮನೆಯಲ್ಲಿ ಸೋಂಕಿತ ವ್ಯಕ್ತಿಯು ಮಾಸ್ಕ್​ ಧರಿಸಬೇಕು. ಇತರರು ಕೂಡ ಕುಟುಂಬದ ಸದಸ್ಯರೊಂದಿಗೆ ಕೂರುವಾಗ ಮಾಸ್ಕ್ ಧರಿಸಬೇಕು. ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು” ಎಂದರು.

    ಇದನ್ನೂ ಓದಿ: ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    ದೇಶದಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಮೀರಿ ಹೆಚ್ಚುತ್ತಿದೆ ಎಂದು ಸರ್ಕಾರದ ಪರವಾಗಿ ಸ್ಪಷ್ಟ ಸೂಚನೆ ನೀಡಿರುವ ಡಾ. ಪೌಲ್, “ಕುಟುಂಬದಲ್ಲಿ ಕರೊನಾ ಪಾಸಿಟೀವ್ ಬಂದಿರುವ ವ್ಯಕ್ತಿಯಿದ್ದಲ್ಲಿ ಅವರು ಮನೆಯೊಳಗೂ ಮಾಸ್ಕ್ ತೊಟ್ಟಿರಬೇಕು. ಇಲ್ಲವಾದಲ್ಲಿ ಕರೊನಾ ವೈರಸ್ ಮನೆಯಲ್ಲಿ ಇತರರಿಗೆ ಹರಡುತ್ತದೆ. ಅಷ್ಟೇ ಅಲ್ಲ, ಸೋಂಕಿತರು ಇಲ್ಲದಿದ್ದರೂ ನಾವೆಲ್ಲ ಮನೆಯಲ್ಲಿ ಮಾಸ್ಕ್​ ಧರಿಸಲು ಆರಂಭಿಸುವ ಸಮಯ ಬಂದಿದೆ ಎಂದು ನಾನು ಹೇಳಬಯಸುತ್ತೇನೆ” ಎಂದಿದ್ದಾರೆ.

    ಕರೊನಾ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಐಸೋಲೇಟ್ ಮಾಡಿಕೊಳ್ಳಬೇಕು ಎಂದು ಸರ್ಕಾರ ಈಗಾಗಲೇ ಹೇಳಿದೆ. “ಟೆಸ್ಟ್ ರಿಪೋರ್ಟ್ ಬರುವವರೆಗೆ ಕಾಯಬೇಡಿ. ಐಸೋಲೇಟ್ ಮಾಡಿಕೊಳ್ಳಿ. ಆರ್​ಟಿ-ಪಿಸಿಆರ್​ ಟೆಸ್ಟ್​ಗಳು ನೆಗೆಟೀವ್ ಬರುವ ಸಾಧ್ಯತೆ ಇದೆ. ಆದ್ದರಿಂದ ರೋಗಲಕ್ಷಣಗಳಿದ್ದಲ್ಲಿ ವ್ಯಕ್ತಿಯು ಕರೊನಾ ಪಾಸಿಟೀವ್ ಎಂದು ತಿಳಿಯಿರಿ” ಎಂದು ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ಹೇಳಿದ್ದಾರೆ.

    ಇದನ್ನೂ ಓದಿ: ‘ಕರ್ಜ್​’, ‘ಮಿಸ್ಟರ್​ ಇಂಡಿಯಾ’, ‘ಅಗ್ನೀಪಥ್​’ ಚಿತ್ರಗಳ ಸಂಕಲನಕಾರ ಇನ್ನಿಲ್ಲ

    ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್​ ಅಗರ್​ವಾಲ್, ಮಾಸ್ಕ್ ಹಾಕಿಕೊಳ್ಳದ್ದರಿಂದ ಇರುವ ಅಪಾಯದ ಬಗ್ಗೆ ಎಚ್ಚರಿಸಿದರು. ಇಬ್ಬರು ವ್ಯಕ್ತಿಗಳು ಮಾಸ್ಕ್ ಹಾಕಿಕೊಳ್ಳದೆ ಸಾಮಾಜಿಕ ಅಂತರ ಪಾಲಿಸದೆ ಇರುವಾಗ ಶೇ. 90 ರಷ್ಟು ಸೋಂಕಿನ ಅಪಾಯ ಇರುತ್ತದೆ. ಆದರೆ ಸೋಂಕಿಲ್ಲದ ವ್ಯಕ್ತಿ ಮಾಸ್ಕ್ ತೊಟ್ಟಲ್ಲಿ ಆ ಅಪಾಯ ಶೇ.30 ಕ್ಕೆ ಇಳಿಯುತ್ತದೆ. “ದೈಹಿಕ ಅಂತರ ಕಾಪಾಡಿಕೊಳ್ಳುವುದೂ ತುಂಬಾ ಮುಖ್ಯ. ಇದನ್ನು ನಿರ್ಲಕ್ಷಿಸಿದಲ್ಲಿ ಒಬ್ಬ ಸೋಂಕಿತನು 30 ದಿನಗಳ ಅವಧಿಯಲ್ಲಿ 406 ಜನರಿಗೆ ಸೋಂಕು ತಗುಲಿಸಬಲ್ಲ. ಅದೇ ಅಂತರ ಕಾಪಾಡಿಕೊಂಡಲ್ಲಿ 30 ದಿನಗಳಲ್ಲಿ 2.5 ಜನರಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತಿಳಿಸಿವೆ” ಎಂದರು. (ಏಜೆನ್ಸೀಸ್)

    ಮುಟ್ಟಿನ ಸಮಯದಲ್ಲಿ ಕರೊನಾ ಲಸಿಕೆ ಪಡೆಯಬಹುದೇ ? ಇಲ್ಲಿದೆ ಉತ್ತರ

    “ಬೆಡ್​ ಇದ್ದಲ್ಲಿ ಯಾವ ಆಸ್ಪತ್ರೆಯೂ ಅಡ್ಮಿಷನ್ ನಿರಾಕರಿಸುವಂತಿಲ್ಲ” ; ಖಾಸಗಿ ಆಸ್ಪತ್ರೆ ವೆಚ್ಚ ಭರಿಸಲಿದೆ ಸರ್ಕಾರ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts