More

    ಯುವಸಮುದಾಯಕ್ಕೆ ಕೆ.ವಿ. ಕಾಮತ್​ ನಾಯಕತ್ವ ಪ್ರೇರಣೆ

    ಡಾ. ಎಚ್​.ಎಸ್​. ಬಲ್ಲಾಳ್​ ಶ್ಲಾಘನೆ — ಮಾಹೆಯಿಂದ ಗೌರವ ಡಾಕ್ಟರೇಟ್​ ಪ್ರದಾನ

    ಉಡುಪಿ: ಬ್ಯಾಂಕಿಂಗ್​ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಕೆ.ವಿ. ಕಾಮತ್​ ಅವರ ನಾಯಕತ್ವ ಹಾಗೂ ದೂರದೃಷ್ಟಿತ್ವ ಯುವಸಮುದಾಯಕ್ಕೆ ಪ್ರೇರಣಾದಾಯಕವಾಗಿದೆ. ದೇಶದ ಆರ್ಥಿಕ ವಲಯಕ್ಕೆ ಸಂಬಂಧಿಸಿ ಆಳ ಜ್ಞಾನ ಹೊಂದಿರುವ ಅವರಿಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸಲಾಗುತ್ತಿದೆ ಎಂದು ಮಾಹೆ ಸಹಕುಲಾಧಿಪತಿ ಡಾ.ಎಚ್​.ಎಸ್​. ಬಲ್ಲಾಳ್​ ಶ್ಲಾಘಿಸಿದರು.

    ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಮಾಹೆ) ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಬ್ಯಾಂಕ್​ – ಹಣಕಾಸು ಮೂಲಸೌಕರ್ಯ ಮತ್ತು ಅಭಿವೃದ್ಧಿ (ಎನ್ಎಬಿಎಫ್ಐಡಿ) ಸಂಸ್ಥೆಯ ಹಾಗೂ ಜಿಯೋ ಫೈನಾನ್ಶಿಯಲ್​ ಸರ್ವೀಸಸ್​ ಲಿಮಿಟೆಡ್​ನ ಅಧ್ಯಕ್ಷ ಕೆ.ವಿ. ಕಾಮತ್​ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನದ ಬಳಿಕ ಮಾತನಾಡಿದರು.

    ಉಪಕುಲಪತಿ ಲೆ.ಜ. (ಡಾ) ಎಂ.ಡಿ. ವೆಂಕಟೇಶ್​ ಅವರು ಕಾಮತ್​ ಅವರಿಗೆ ಡಾಕ್ಟರೇಟ್​ ಪ್ರದಾನಿಸಿ ಮಾತನಾಡಿ, ವಿದ್ಯಾರ್ಥಿಗಳಿಗೂ, ಪ್ರಾಧ್ಯಾಪಕರಿಗೂ ಸಹ ಅವರ ಸಾಧನೆ ಸ್ಫೂರ್ತಿದಾಯಕವಾಗಿದೆ. ಅವರ ಅನುಭವ ಭವಿಷ್ಯದ ನಾಯಕರನ್ನು ರೂಪಿಸಲು ಸಹಕಾರಿಯಾಗಿದೆ ಎಂದರು.

    ಸಮಾರಂಭದಲ್ಲಿ ವಾಸಂತಿ ಆರ್​ ಪೈ, ಡಾ ರಂಜನ್​ ಆರ್​. ಪೈ, ಡಾ. ದಿಲೀಪ್​ ಜಿ. ನಾಯಕ್​, ಡಾ. ಪಿ.ಗಿರಿಧರ್​ ಕಿಣಿ ಮತ್ತು ಅಕಾಡೆಮಿಕ್​ ಕೌನ್ಸಿಲ್​ನ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ನನ್ನ ವೃತ್ತಿ ಜೀವನದುದ್ದಕ್ಕೂ ನಾನು ಭಾರತದ ಸಂಸ್ಥೆಗಳನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಹಾಗೂ ಸುಸ್ಥಿರ ಅಭಿವೃದ್ಧಿ ಪ್ರತಿಪಾದಿಸಲು ಶ್ರಮಿಸಿದ್ದೇನೆ. ಮಾಹೆಯಂತಹ ಗೌರವಾನ್ವಿತ ಸಂಸ್ಥೆಯಿಂದ ಗುರುತಿಸಲ್ಪಟ್ಟಿದ್ದಲ್ಲದೆ, ಗೌರವ ಡಾಕ್ಟರೇಟ್​ ಲಭಿಸಿರುವುದಕ್ಕೆ ಸಂತಸ ತಂದಿದೆ. ಈ ಮನ್ನಣೆ ನನಗಷ್ಟೇ ಅಲ್ಲ, ನನ್ನ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಸಲ್ಲುತ್ತದೆ.

    ಕೆ.ವಿ. ಕಾಮತ್​. ಅಧ್ಯಕ್ಷ, ಎನ್ಎಬಿಎಫ್ಐಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts