More

  ರಾಮ್​ಚರಣ್​ಗೆ ಗೌರವ ಡಾಕ್ಟರೇಟ್..

  ಹೈದರಾಬಾದ್ : ‘ಆರ್ ಆರ್ ಆರ್’ ಚಿತ್ರದ ಮೂಲಕ ವಿಶೇಷ ಜನಪ್ರಿಯತೆ ಗಳಿಸಿದ ರಾಮ್ ಚರಣ್ ಮತ್ತೊಂದು ಗೌರವಾದರಕ್ಕೆ ಕಾರಣರಾದರು. ಅವರಿಗೆ ಚೆನ್ನೈನ ವೇಲ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

  ಇದನ್ನೂ ಓದಿ: ವಸಂತ ನವರಾತ್ರಿಯಂದು ಮೀನು ತಿಂದು ಟೀಕೆಗೆ ಗುರಿಯಾದ ತೇಜಸ್ವಿ!

  ಆ.13ರಂದು ನಡೆಯಲಿರುವ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಲ್ಲಿ ರಾಮ್ ಚರಣ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಚರಣ್ ಅವರು ಕಲಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಲಾಗಿದೆ ಎಂದು ವಿವಿಯ ಉನ್ನತ ಮೂಲಗಳು ತಿಳಿಸಿವೆ.

  ರಾಮ್ ಚರಣ್ ಗೆ ಗೌರವ ಡಾಕ್ಟರೇಟ್ ನೀಡಿದ್ದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.

  ‘ಆರ್​ಆರ್​ಆರ್​’ ಮತ್ತು ‘ಆಚಾರ್ಯ’ ನಂತರ ರಾಮ್ ಚರಣ್ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ. ಇದೊಂದು ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿ ತಯಾರಾಗುತ್ತಿದೆ.

  ಅಂಜಲಿ, ಎಸ್.ಜೆ.ಸೂರ್ಯ, ಜಯರಾಮ್, ಸುನಿಲ್, ನಾಜರ್, ಶ್ರೀಕಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಚಿತ್ರ ವಿನಾಯಕ ಚೌತಿಯ ಉಡುಗೊರೆಯಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ. ‘ಉಪ್ಪೇನ’ ಖ್ಯಾತಿಯ ಬುಚ್ಚಿಬಾಬು ಜೊತೆಗಿನ ಹೊಸ ಸಿನಿಮಾವನ್ನು ಚರಣ್ ಇತ್ತೀಚೆಗೆ ಘೋಷಿಸಿದ್ದಾರೆ. ಜಾನ್ವಿ ಕಪೂರ್ ನಾಯಕಿ. ಇದಾದ ನಂತರ ಸುಕುಮಾರ್ ನಿರ್ದೇಶನದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

  ಸಮಾಜವಾದಿ ಪಕ್ಷದ ಪರ ಪ್ರಚಾರಕ್ಕೆ ಮೂರನೇ ತಲೆಮಾರು.. ಅಖಾಡಕ್ಕೆ ಮುಲಾಯಂ ಮೊಮ್ಮಗಳು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts