More

    ಸಾಧನೆಗೆ ಪಾಲಕರ ಸಹಕಾರ ಮುಖ್ಯ


    ಮಂಡ್ಯ: ಪಿಎಸ್‌ಸಿ ಪರೀಕ್ಷೆ ಉತ್ತೀರ್ಣನಾಗಲು ಪ್ರತಿಯೊಂದು ಹಂತದಲ್ಲೂ ನನ್ನ ಪಾಲಕರು ಹಾಗೂ ಸಹೋದರ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ್ದರು ಎಂದು ಯುಪಿಎಸ್‌ಸಿ ಉತ್ತೀರ್ಣಗೊಂಡಿರುವ ಬಿ.ಎಸ್. ಚಂದನ್ ಹೇಳಿದರು.


    ಹಲಗೂರಿನ ಮಾಸ್ಟರ್ ದೊಡ್ಡಿಗ್ರಾಮದ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


    ಹುಟ್ಟಿದ ಗ್ರಾಮದಲ್ಲೇ ವ್ಯಾಸಂಗ ಮಾಡಿ, ಸಾಧನೆ ಮಾಡಿ ಸನ್ಮಾನ ಮಾಡಿಸಿಕೊಳ್ಳುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಕೂಡ ಸಾಧಕರಾಗಬೇಕು ಎಂಬುದು ನನ್ನ ಆಶಯ. ಹಾಗಾಗಿ, ಪ್ರಾಥಮಿಕ ಹಂತದದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ, ಶಿಕ್ಷಕರ ಮಾರ್ಗದರ್ಶನ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.


    ಸಾಧನೆ ಹಾದಿ ತುಳಿದಾಗ ಸಾಕಷ್ಟು ಸಂಕಷ್ಟಗಳು, ಸಮಸ್ಯೆಗಳು ಎದುರಾಗಬಹುದು. ಆದರೆ, ಅದೆಲ್ಲವನ್ನು ನುಂಗಿಕೊಂಡು ಗುರಿಯಡೆಗೆ ಮುನ್ನಡೆಯಬೇಕು. ಅಲ್ಲದೇ, ಪಾಲಕರು ಕೂಡ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಲು ಪೂರ್ಣ ಸಹಕಾರ ನೀಡಬೇಕು ಎಂದು ತಿಳಿಸಿದರು.


    ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಚಂದನ್ ಅವರನ್ನು ಮಾದರಿಯಾಗಿ ಸ್ವೀಕರಿಸಿ ತಮ್ಮ ಸಾಧನೆಯಡೆಗೆ ಹೆಜ್ಜೆ ಇಡಬೇಕು ಎಂದರು.ಕಾರ್ಯಕ್ರಮ ರೇಷ್ಮೆ ರಾಜೋತ್ಸವ ವಿಜೇತ ಕಿರಣಗೆರೆ ಜಗದೀಶ್, ಎಸ್‌ಡಿಎಂಸಿ ಅಧ್ಯಕ್ಷ ರಾಜು, ಹಲಗೂರು ಸಬ್‌ಇನ್ಸ್‌ಪೆಕ್ಟರ್ ಬಿ. ಮಹೇಂದ್ರ, ಬಿ.ಎಸ್.ಚೇತನ್, ದಾವಣಗೆರೆ ಶಿಕ್ಷಕ ಪ್ರಭಾಕರ್, ಎಂ.ಬಸವರಾಜು, ಅರಣ್ಯ ಇಲಾಖೆಯ ಅಧಿಕಾರಿಗಳಾದ ರವಿ ಬುರ್ಜಿ, ಪ್ರವೀಣ್ ಕುಮಾರ್ ಇತರರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts