More

    ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    ನವದೆಹಲಿ : ಐಪಿಎಲ್​ 2021 ರಲ್ಲಿ ಕೊಲ್ಕತಾ ನೈಟ್​ ರೈಡರ್ಸ್​ ತಂಡದಿಂದ ಆಡುತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕುಮ್ಮಿನ್ಸ್​, ‘ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಸಪ್ಲೈಸ್​ ಖರೀದಿಸುವುದಕ್ಕಾಗಿ’ ಪಿಎಂ ಕೇರ್ಸ್ ಫಂಡ್​ಗೆ 50,000 ಡಾಲರ್ ದೇಣಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಇತರ ಐಪಿಎಲ್ ಆಟಗಾರರಿಗೂ ಮತ್ತು ‘ಭಾರತದ ಉತ್ಸಾಹ ಮತ್ತು ಉದಾರತೆಗಳಿಂದ ಪ್ರಭಾವಿತರಾಗಿರುವ ಎಲ್ಲರಿಗೂ’ ಈ ರೀತಿಯ ಸಹಾಯ ಮಾಡಲು ಮುಂದೆ ಬನ್ನಿ ಎಂದು ಕರೆ ನೀಡಿದ್ದಾರೆ.

    “ಭಾರತವನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ಇಲ್ಲಿಯ ಜನರು ತುಂಬಾ ಒಳ್ಳೆಯವರು. ಇಷ್ಟೊಂದು ಜನರು ಹೀಗೆ ನರಳುತ್ತಿರುವುದನ್ನು ತಿಳಿದು ದುಃಖವಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ನಾವು ನಿಸ್ಸಹಾಯಕರು ಎಂದೆನಿಸುವುದು ಸಹಜ. ಆದರೆ, ನಮ್ಮ ಭಾವನೆಗಳಿಗೆ ಕ್ರಿಯಾರೂಪ ಕೊಟ್ಟು ಜನರ ಜೀವನದಲ್ಲಿ ಬೆಳಕು ಮೂಡಿಸುವ ಕಾರ್ಯ ಮಾಡಬಹುದು ಎಂದು ನನಗನ್ನಿಸುತ್ತಿದೆ” ಎಂದು ಕುಮ್ಮಿನ್ಸ್​ ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ಪಿಎಂ ಕೇರ್ಸ್​ ಫಂಡ್​ಗೆ ನಿರ್ದಿಷ್ಟವಾಗಿ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ಸಲುವಾಗಿ ಹಣವನ್ನು ಬಳಸಿ ಎಂದು 50 ಸಾವಿರ ಡಾಲರ್ (37,40,920 ರೂ.) ನೀಡಿದ್ದಾರೆ. ‘ನನ್ನ ಕಾಣಿಕೆ ಚಿಕ್ಕದಿರಬಹುದು’ ಎಂದಿರುವ ಕುಮ್ಮಿನ್ಸ್​, ಇದರಿಂದ ಯಾರಿಗಾದರೂ ಸ್ವಲ್ಪ ಸಹಾಯವಾದರೂ ಸಾಕು ಎಂದಿದ್ದಾರೆ.

    ಇದೇ ಟ್ವೀಟ್​ನಲ್ಲಿ, ಕರೊನಾ ಸಮಸ್ಯೆ ಹದಗೆಟ್ಟಿರುವ ಸಮಯದಲ್ಲಿ ಐಪಿಎಲ್​ ನಡೆಸುವುದು ಸರಿಯೇ ಎಂದು ಚರ್ಚೆ ನಡೆಯುತ್ತಿರುವ ಬಗ್ಗೆ ಕುಮ್ಮಿನ್ಸ್ ಉಲ್ಲೇಖಿಸಿದ್ದಾರೆ. “ಬಹುತೇಕ ಜನಸಂಖ್ಯೆಯು ಲಾಕ್​ಡೌನ್​ನಲ್ಲಿರುವ ಸಂದರ್ಭದಲ್ಲಿ ಐಪಿಎಲ್​ ಆಡುವುದರಿಂದ, ಸಂಕಟದ ಸಮಯದಲ್ಲಿ ಜನರಿಗೆ ಕೆಲವು ಗಂಟೆಗಳ ಆನಂದ ಮತ್ತು ಸಮಾಧಾನ ಸಿಗುತ್ತದೆ ಎಂಬುದು ಭಾರತ ಸರ್ಕಾರದ ಚಿಂತನೆಯಾಗಿದೆ ಎಂದು ತಿಳಿಸಿದ್ದಾರೆ. ಲಕ್ಷಾಂತರ ಜನರೊಂದಿಗೆ ಈ ರೀತಿ ಸ್ಪಂದಿಸುವುದಕ್ಕೆ ಅವಕಾಶ ಸಿಕ್ಕಿರುವುದು ನಮ್ಮ ಅದೃಷ್ಟ” ಎಂದು ಕುಮ್ಮಿನ್ಸ್​ ಹೇಳಿದ್ದಾರೆ.

    ರಾಜಕಾರಣಿಗಳ ಮೇಲೆ ನೆಟ್ಟಿಗರ ಕೆಂಗಣ್ಣು : ನಾಯಕರ ಖಾಸಗಿ ನಂಬರ್​ಗಳು ವೈರಲ್ !

    ಹರಿದುಬಂತು ಸಹಾಯ : ದೆಹಲಿ, ಮುಂಬೈ ತಲುಪಿದ ಆಕ್ಸಿಜನ್ ಕಾನ್ಸಂಟ್ರೇಟರ್​ಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts