More

    ಧೋನಿ, ರಾಹುಲ್​ಗಾಂಧಿ ಸಾರ್ವಕಾಲಿಕ ಬೆಸ್ಟ್‌ ಫಿನಿಷರ್ ಏಕೆ? ವಿವರಣೆ ನೀಡಿದ ಸೆಂಟ್ರಲ್​ ಮಿನಿಸ್ಟರ್‌!

    ಭೋಪಾಲ್: ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಘಟಾನುಘಟಿ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್​ ಅವರು ಸಹ ಭರ್ಜರಿ ಮಾಡುತ್ತಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ.

    ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಓವೈಸಿ ಎದುರು ಕಣಕ್ಕಿಳಿಸಿದ ಬಿಜೆಪಿ ಅಭ್ಯರ್ಥಿಗೆ ವೈ ಪ್ಲಸ್’ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ

    ಶನಿವಾರ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರದೊಂದಿಗೆ ಕಾಂಗ್ರೆಸ್‌ಗೆ ಮುರಿಯಲಾಗದ ಸಂಬಂಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯಂತೆ, ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ರಾಹುಲ್​ ಗಾಂಧಿ ”ಬೆಸ್ಟ್ ಫಿನಿಶರ್” ಎಂದು ವ್ಯಂಗ್ಯವಾಡಿದ್ದಾರೆ.
    ಯಾರಾದರೂ ನನ್ನನ್ನು ಭಾರತೀಯ ರಾಜಕೀಯದಲ್ಲಿ ಬೆಸ್ಟ್ ಫಿನಿಷರ್ ಯಾರು ಎಂದು ಕೇಳಿದರೆ, ನಾನು ರಾಹುಲ್ ಗಾಂಧಿ ಎಂದು ಹೇಳಲು ಬಯಸುತ್ತೇನೆ. ಇದೇ ಕಾರಣಕ್ಕೆ ಹಲವಾರು ನಾಯಕರು ಕಾಂಗ್ರೆಸ್ ತೊರೆದಿದ್ದಾರೆ ಎಂದು ಹೇಳಿದರು.

    ಧೋನಿ, ರಾಹುಲ್​ಗಾಂಧಿ ಸಾರ್ವಕಾಲಿಕ ಬೆಸ್ಟ್‌ ಫಿನಿಷರ್ ಏಕೆ? ವಿವರಣೆ ನೀಡಿದ ಸೆಂಟ್ರಲ್​ ಮಿನಿಸ್ಟರ್‌!

    ಕಾಂಗ್ರೆಸ್ ಮತ್ತು ಭ್ರಷ್ಟಾಚಾರಕ್ಕೆ ಅವಿನಾಭಾವ ಸಂಬಂಧ

    ಒಂದು ಕಾಲದಲ್ಲಿ ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿತ್ತು, ಆದರೆ ಈಗ ಅದು ಎರಡು ಅಥವಾ ಮೂರು ಕೇವಲ ಸಣ್ಣ ರಾಜ್ಯಗಳಲ್ಲಿ ಮಾತ್ರ ಸರ್ಕಾರವನ್ನು ಹೊಂದಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಮತ್ತು ಭ್ರಷ್ಟಾಚಾರಕ್ಕೆ ಅವಿನಾಭಾವ ಸಂಬಂಧವಿದೆ. ಹೆಚ್ಚಿನ ಕಾಂಗ್ರೆಸ್ ಸರ್ಕಾರಗಳು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದ್ದವು, ಆದರೆ ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಯಾವುದೇ ಸಚಿವರ ವಿರುದ್ಧ ಅಂತಹ ಆರೋಪಗಳನ್ನು ಮಾಡಲಾಗಿಲ್ಲ ಎಂದು ಸಿಂಗ್ ಹೇಳಿದರು.

    ಒಂದು ರಾಷ್ಟ್ರ ಒಂದು ಚುನಾವಣೆ ಸಿಂಗ್​ ಪ್ರತಿಕ್ರಿಯೆ: ಒಂದು ರಾಷ್ಟ್ರ, ಒಂದು ಚುನಾವಣೆ ಪರ ಬ್ಯಾಟ್​ ಬೀಸಿದ ಕೇಂದ್ರ ಸಚಿವರು, ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಏಕಕಾಲಿಕ ಚುನಾವಣೆಗಳು ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಐದು ವರ್ಷಗಳಲ್ಲಿ ಎರಡು ಬಾರಿ -ಸ್ಥಳೀಯ ಸಂಸ್ಥೆಗಳಿಗೆ ಒಂದು ಬಾರಿ, ನಂತರ ವಿಧಾನಸಭೆ ಮತ್ತು ಲೋಕಸಭೆಗೆ ಚುನಾವಣೆಗಳು ಒಂದು ಬಾರಿ ನಡೆಯಬೇಕು ಎಂದು ಸಮರ್ಥಿಸಿಕೊಂಡರು.

    2045ರ ವೇಳೆಗೆ ಭಾರತವು ಸೂಪರ್ ಪವರ್ ಆಗಲಿದೆ: 2027ರ ಆರಂಭದ ವೇಳೆಗೆ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಇರಲಿದೆ ಎಂದು ಕೆಲವು ದೊಡ್ಡ ಹಣಕಾಸು ಸಂಸ್ಥೆಗಳು ಭವಿಷ್ಯ ನುಡಿದಿವೆ. ಮೋದಿ ಸರ್ಕಾರವು ಹತ್ತು ವರ್ಷಗಳ ಹಿಂದೆ 11 ನೇ ಸ್ಥಾನದಿಂದ ಮೊದಲ ಐದು ಸ್ಥಾನಕ್ಕೆ ಬಂದಿದೆ ಎಂದು ರಕ್ಷಣಾ ಸಚಿವರು ಹೇಳಿದರು. 2045 ರ ವೇಳೆಗೆ ಭಾರತವು ಸೂಪರ್ ಪವರ್ ಆಗಲಿದೆ ಎಂದು ಸಿಂಗ್ ಹೇಳಿದರು.

    ಆಸ್ತಿ ಘೋಷಣೆ ಮಾಡಿದ ಡಾ.ಮಂಜುನಾಥ್‌: ಸ್ಥಿರಾಸ್ತಿ-ಚರಾಸ್ತಿ ಮೌಲ್ಯವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts