More

    ಹೈದರಾಬಾದ್‌ನಲ್ಲಿ ಓವೈಸಿ ಎದುರು ಕಣಕ್ಕಿಳಿಸಿದ ಬಿಜೆಪಿ ಅಭ್ಯರ್ಥಿಗೆ ವೈ ಪ್ಲಸ್’ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ

    ನವದೆಹಲಿ: 2024 ಲೋಕಸಭೆ ಚುನಾವಣೆ ಬಿಜೆಪಿ ಅಭ್ಯರ್ಥಿಗಳಾದ ಹೈದರಾಬಾದ್​ನ ಕೊಂಪೆಲ್ಲಾ ಮಾಧವಿ ಲತಾ ಹಾಗೂ ಜೆಎಂಎಂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸೀತಾ ಸೊರೆನ್‌ ಅವರಿಗೆ ಕೇಂದ್ರ ಸರ್ಕಾರವು ವೈ ಪ್ಲಸ್​ ಭದ್ರತೆಯನ್ನು ಒದಗಿಸಲು ಮುಂದಾಗಿದೆ.

    ಇದನ್ನೂ ಓದಿ: ಲಿವ್ ಇನ್ ಸಂಬಂಧ ಬ್ರೇಕಪ್ ಆದರು ಜೀವನಾಂಶ ಕೊಡಬೇಕು! ಹೈಕೋರ್ಟ್ ಮಹತ್ವದ ತೀರ್ಪು

    ಮಾಧವಿ ಲತಾಗೆ ಅವರಿಗೆ ಬೆದರಿಕೆಯ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯು ಬಿಜೆಪಿ ಅಭ್ಯರ್ಥಿಗಳಿಬ್ಬರಿಗೆ ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ. ವಿಐಪಿ ಭದ್ರತೆಯ ಭಾಗವಾಗಿ ಮಾಧವಿಲತ್‌ಗೆ 11 ಸಿಆರ್​ಪಿಎಫ್ ಪಡೆ ಸಿಬ್ಬಂದಿ ಕಾವಲು ಕಾಯಲಿದ್ದಾರೆ. ಮಾಧವಿಲತಾ ಅವರ ಮನೆಗೆ ಇನ್ನೂ ಐವರು ಶಸ್ತ್ರಸಜ್ಜಿತ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ ಎಂದು ತಿಳಿದು ಬಂದಿದೆ.

    ಈ ಸಲದ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿ ಶೂನ್ಯ ದಾಖಲೆ ಇರುವ ಕ್ಷೇತ್ರಗಳಲ್ಲಿ ಖಾತೆ ತೆರೆಯಲು ಶತ ಪ್ರಯತ್ನ ನಡೆಸುತ್ತಿದೆ. ಅಂತಹ ಕ್ಷೇತ್ರಗಳಲ್ಲಿ ಹೈದರಾಬಾದ್‌ ಕೂಡ ಒಂದು. ಕಳೆದ 40 ವರ್ಷಗಳಿಂದ ಓವೈಸಿ ಮನೆತನದ ಭದ್ರಕೋಟೆಯಾಗಿದೆ. ಆ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಎಐಎಂಐಎಮ್‌ನ ಹಾಲಿ ಸಂಸದ ಅಸಾದುದ್ದೀನ್‌ ಓವೈಸಿ ಎದುರು ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಕಣಕ್ಕಿಳಿಸಿದೆ.

    ಹೈದರಾಬಾದ್‌ನಲ್ಲಿ ಓವೈಸಿ ಎದುರು ಕಣಕ್ಕಿಳಿಸಿದ ಬಿಜೆಪಿ ಅಭ್ಯರ್ಥಿಗೆ ವೈ ಪ್ಲಸ್’ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ

    ಹಿಂದೂ ಫೈರ್‌ ಬ್ರಾಂಡ್‌ ನಾಯಕಿ ಮಾಧವಿ ಲತಾ

    ಹೈದರಾಬಾದ್‌ನಲ್ಲಿ ಮಾಧವಿ ಲತಾ ಅವರು ನಿರಂತರ ಸಂಪರ್ಕ ಹೊಂದಿದ್ದು, ಹಿಂದೂ ಫೈರ್‌ ಬ್ರಾಂಡ್‌ ನಾಯಕಿ ಕೂಡ ಆಗಿದ್ದಾರೆ. ಓವೈಸಿ ವಿರುದ್ಧ ಸತತ ಹೋರಾಟ ಸಂಘಟಿಸುತ್ತಿರುವ ಮಾಧವಿ ಲತಾ ಅವರು ಈ ಬಾರಿ ಕಮಾಲ್‌ ಮಾಡಬಹುದು ಎನ್ನುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದ್ದು, ಹೈದರಾಬಾದ್‌ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಇರುವ ಓವೈಸಿ ಭದ್ರಕೋಟೆಯನ್ನು ಪುಡಿಗೊಳಿಸುತ್ತಾ ಕಾದು ನೋಡಬೇಕಿದೆ.
    ಕಳೆದ 40 ವರ್ಷಗಳಿಂದ ಓಲ್ಡ್‌ ಸಿಟಿಯೂ ಕ್ಷೇತ್ರ ಓವೈಸಿ ಮನೆತನದ ಭದ್ರಕೋಟೆಯಾಗಿದೆ. ಚುನಾವಣಾ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಅವರಿಗೆ ಅಹಿತಕರ ಘಟನೆ ನಡೆಯದಂತೆ ಈ ಕ್ರಮ ಕೈಗೊಳ್ಳಲಾಗಿದೆ.

    ಯಾರು ಈ ಮಾಧವಿ ಲತಾ?: ಹೈದರಾಬಾದ್‌ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿರುವ ಮಾಧವಿ ಲತಾ ಅಥವಾ ಕೊಂಪೆಲ್ಲಾ ಮಾಧವಿ ಲತಾ ಅವರು ಹೈದರಾಬಾದ್‌ನಲ್ಲಿ ತ್ರಿವಳಿ ತಲಾಖ್ ವಿರುದ್ಧ ಬಿಜೆಪಿ ನಡೆಸಿದ ಪ್ರಚಾರದ ನೇತೃತ್ವ ವಹಿಸಿದ್ದರು. ಸಾಂಸ್ಕೃತಿಕ ಪ್ರತಿನಿಧಿ ಆಗಿರುವ ಇವರು ಹೈದರಾಬಾದ್‌ನ ವಿರಿಂಚಿ ಆಸ್ಪತ್ರೆಯ ಮುಖ್ಯಸ್ಥರಾಗಿದ್ದಾರೆ. ಅದಲ್ಲದೇ ಮಾಧವಿ ಲತಾ ಅವರು ವೃತ್ತಿಪರ ಭರತನಾಟ್ಯ ನೃತ್ಯಪಟು ಆಗಿದ್ದು, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿಗೆ ತಾಯಿಯಾಗಿದ್ದಾರೆ.

    ಯಾರು ಈ ಸೀತಾ ಸೊರೆನ್?: ಲೋಕಸಭೆ ಚುನಾವಣೆಗೂ ಮುನ್ನ ಜಾರ್ಖಂಡ್‌ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಸಂಸ್ಥಾಪಕ ಶಿಬು ಸೊರೆನ್ ಅವರ ಸೊಸೆ ಸೀತಾ, ಜೆಎಂಎಂ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
    ತಮ್ಮ ಕುಟುಂಬದೊಂದಿಗೆ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿ ಸೀತಾ ಸೊರೆನ್ ಅವರು ಜೆಎಂಎಂಗೆ ರಾಜೀನಾಮೆ ಸಲ್ಲಿಸಿದ್ದರು. ಮಾಜಿ ಸಿಎಂ ಹೇಮಂತ್ ಸೊರೆನ್ ಅವರಿಗೆ ಪಕ್ಷದ ವೇದಿಕೆಗಳಲ್ಲಿ ಮಣೆ ಹಾಕುತ್ತಿರುವ ಬಗ್ಗೆ ಅವರು ಬೇಸರಗೊಂಡಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿದ್ದರು.

    ಆಸ್ತಿ ಘೋಷಣೆ ಮಾಡಿದ ಡಾ.ಮಂಜುನಾಥ್‌: ಸ್ಥಿರಾಸ್ತಿ-ಚರಾಸ್ತಿ ಮೌಲ್ಯವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts