More

    ಭೂಮಿ ಬಂಜೆಯಾಗುವ ಪರಿಸ್ಥಿತಿ

    ಹುಣಸೂರು: ಭೂತಾಯಿಯ ದುರುಪಯೋಗದಿಂದಾಗಿ ಭೂಮಿ ಬಂಜೆಯಾಗುವ ಪರಿಸ್ಥಿತಿ ಉಂಟಾಗಿದೆ ಎಂದು ಒಡನಾಡಿ ಸಂಸ್ಥೆಯ ಕೆ.ವಿ.ಸ್ಟ್ಯಾನ್ಲಿ ಬೇಸರಿಸಿದರು.

    ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಭೂಮಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೆಲವು ಕೆಟ್ಟ ಮನುಷ್ಯರ ನಡೆಯಿಂದಾಗಿ ಇಡೀ ಮನುಕುಲ ತೊಂದರೆಗೊಳಗಾಗುತ್ತಿದೆ. ಭೂಮಿಯ ಮೇಲಿನ ದೌರ್ಜನ್ಯ ಮಕ್ಕಳ ಮೇಲಿನ ದೌರ್ಜನ್ಯದಷ್ಟೇ ಪಾಪದ ಕೆಲಸವಾಗಿದೆ. ಭೂಮಿಯ ಮೇಲಿನ ನದಿ, ಝರಿಗಳು ಮನುಷ್ಯನ ದೇಹದ ನರನಾಡಿಗಳಂತೆ. ಅವುಗಳನ್ನು ಕಲುಷಿತಗೊಳಿಸುವ ಮೂಲಕ ನಮಗೆ ನಾವೆ ವಿಷ ತಿನ್ನುವ ಪರಿಸ್ಥಿತಿ ತಂದುಕೊಂಡಿದ್ದೇವೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

    ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಮಾತನಾಡಿ, 450 ಕೋಟಿ ವರ್ಷದ ಭೂಮಿಗೆ ಎರಡು ಕಾಲಿನ ಮಾನವ ಭೂಮಿಯ ರಕ್ಷಕನಾಗದೆ ಭಕ್ಷಕನಾಗುತ್ತಿರುವುದು ದುರಂತಕ್ಕೆ ಕಾರಣವಾಗುತ್ತಿದೆ ಎಂದರು.

    ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಗಿಡಮೂಲಿಕೆ ತಜ್ಞೆ ಆದಿವಾಸಿ ಮಹಿಳೆ ಮಾಸ್ತಮ್ಮ ಮಾತನಾಡಿದರು. ಆದಿವಾಸಿ ಪಾರ್ಲಿಮೆಂಟ್ ಅಧ್ಯಕ್ಷ ಹರ್ಷ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಾರ್ವತಿ, ಪ್ರಕಾಶ್, ಶಾರದಾ, ರಕ್ಷಿತಾ, ಧನ್ಯಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts