More

    ‘ಕರ್ಜ್​’, ‘ಮಿಸ್ಟರ್​ ಇಂಡಿಯಾ’, ‘ಅಗ್ನೀಪಥ್​’ ಚಿತ್ರಗಳ ಸಂಕಲನಕಾರ ಇನ್ನಿಲ್ಲ

    ಮುಂಬೈ: ‘ಮೌಸಮ್​’, ‘ಹೀರೋ’, ‘ರಾಮ್​ ಲಖನ್​’, ‘ಕರ್ಜ್​’, ‘ಸೌದಾಗರ್​’, ‘ಅಗ್ನೀಪಥ್​’, ‘ಗುಲಾಮ್​’, ‘ಆಂಧಿ’ ಸೇರಿದಂತೆ ಬಾಲಿವುಡ್​ನ ಹಲವು ಸೂಪರ್​ ಹಿಟ್​ ಚಿತ್ರಗಳ ಸಂಕಲನಕಾರರಾಗಿದ್ದ ವಾಮನ್​ ಭೋಂಸ್ಲೆ (87) ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.

    ಇದನ್ನೂ ಓದಿ: ನಾವ್ಯಾರೂ ಆರಾಮಾಗಿಲ್ಲ.. ಪ್ಲೀಸ್ ಒಬ್ರಿಗೊಬ್ರು ಹೆಲ್ಪ್​ ಮಾಡಿ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

    ವಾಮನ್​ ಭೋಂಸ್ಲೆ ಅವರು ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಡಯಾಬಿಟೀಸ್​ಗೆ ತುತ್ತಾಗಿದ್ದ ಅವರು, ಇತ್ತೀಚೆಗೆ ನೆನಪಿನ ಶಕ್ತಿ ಸಹ ಕಳೆದುಕೊಂಡಿದ್ದರಂತೆ. ಕಳೆದ ನಾಲ್ಕೈದು ದಿನಗಳಿಂದ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದ ಅವರು, ಸೋಮವಾರ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಕೊನೆಯುಸಿರೆಳೆದರು ಎಂದು ಅವರ ಸಂಬಂಧಿ ದಿನೇಶ್​ ಭೋಂಸ್ಲೆ ತಿಳಿಸಿದ್ದಾರೆ.

    ಮೂಲತಃ ಗೋವಾದವರಾದ ಭೋಂಸ್ಲೆ, 50ರ ದಶಕದಲ್ಲಿ ಮುಂಬೈಗೆ ಬಂದು ಅಂದಿನ ಖ್ಯಾತ ಸಂಕಲನಕಾರ ಡಿ.ಎನ್​. ಪೈ ಅವರ ಸಹಾಯಕರಾಗಿ ಕೆಲಸ ಶುರು ಮಾಡಿದ್ದಾರೆ. ಫಿಲ್ಮಿಸ್ಥಾನ್​ ಸೇರಿದಂತೆ ಹಲವು ಸ್ಟುಡಿಯೋಗಳಲ್ಲಿ ಸಂಕಲನ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು, 1969ರಲ್ಲಿ ಬಿಡುಗಡೆಯಾದ ರಾಜ್​ ಖೋಸ್ಲಾ ನಿರ್ದೇಶನದ ‘ದೋ ರಾಸ್ತೆ’ ಚಿತ್ರದ ಮೂಲಕ ಸ್ವತಂತ್ರ ಸಂಕಲನಕಾರರಾದರು.

    ನಂತರದ ವರ್ಷಗಳಲ್ಲಿ ಬಾಲಿವುಡ್​ನ ಬೇಡಿಕೆಯ ಸಂಕಲನಕಾರರಾದ ಅವರು, ಹಲವು ಜನಪ್ರಿಯ ನಿರ್ದೇಶಕರ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅದರಲ್ಲೂ ಸುಭಾಶ್​ ಘಾಯ್​ ನಿರ್ದೇಶನದ ಮೊದಲ ಚಿತ್ರ ‘ಕಾಲಿಚರಣ್​’ನಿಂದ ‘ಖಳನಾಯಕ್​’ವರೆಗೂ ಎಲ್ಲ ಚಿತ್ರಗಳ ಸಂಕಲನಕಾರರಾಗಿ ದುಡಿದಿದ್ದಾರೆ. ಈ ಪೈಕಿ, 1978ರಲ್ಲಿ ಬಿಡುಗಡೆಯಾದ ‘ಇಂಕಾರ್​’ ಚಿತ್ರದ ಸಂಕಲನಕ್ಕಾಗಿ ಭೋಂಸ್ಲೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಸಿಕ್ಕಿತ್ತು.

    ಇದನ್ನೂ ಓದಿ: ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಯ ಒಟ್ಟು ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?

    ವಾಮನ್​ ಭೋಂಸ್ಲೆ ಅವರ ನಿಧನಕ್ಕೆ ಸುಭಾಶ್​ ಘಾಯ್​, ಮಧುರ್​ ಭಂಡಾರ್ಕರ್​, ವಿಕ್ರಮ್​ ಭಟ್​ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

    ಮುಂದಕ್ಕೆ ಹೋಯ್ತು ಭಾರತದ ಮೊದಲ ಪ್ಯಾನ್​ ವರ್ಲ್ಡ್​ ಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts