ಮುಂಬೈ: ಭಾರತದ ಮೊದಲ ಪ್ಯಾನ್ ವರ್ಲ್ಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ರಭಾಸ್-ದೀಪಿಕಾ ಪಡುಕೋಣೆ ಚಿತ್ರವು ಇದೀಗ ಸ್ವಲ್ಪ ಮುಂದಕ್ಕೆ ಹೋಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಜುಲೈನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರವು ಇದೇ ವರ್ಷ ಅಕ್ಟೋಬರ್ಗೆ ಪೋಸ್ಟ್ಪೋನ್ ಆಗಿದೆ.
ನಾಗ್ ಅಶ್ವಿನ್ ಅಭಿನಯದ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚಿತ್ರವು ಬರೀ ಭಾರತದ ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದಷ್ಟೇ ಅಲ್ಲ, ಇಂಗ್ಲೀಷ್ನಲ್ಲೂ ಬಿಡುಗಡೆಯಾಗುತ್ತಿದೆ. 400 ಕೋಟಿ ವೆಚ್ಚದ ಈ ಚಿತ್ರವು ಭಾರತದ ಮೊದಲ ಪ್ಯಾನ್ ವರ್ಲ್ಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಅಶ್ವಿನಿ ದತ್ ಅವರು ತಮ್ಮ ವೈಜಯಂತಿ ಮೂವೀಸ್ ಬ್ಯಾನರ್ನಡಿ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಯ ಒಟ್ಟು ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?
ಕಳೆದ ವರ್ಷವೇ ಘೋಷಣೆಯಾಗಿದ್ದ ಈ ಚಿತ್ರವು ಜುಲೈನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ, ಕರೊನಾ ಹಾವಳಿ ಹೆಚ್ಚಿರುವುದರಿಂದ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಇನ್ನೂ ಮುಗಿದಿಲ್ಲವಾದ್ದರಿಂದ, ಚಿತ್ರೀಕರಣ ಅಕ್ಟೋಬರ್ಗೆ ಹೋಗಿದೆ ಎಂದು ಹೇಳಲಾಗಿದೆ.
ಸದ್ಯ, ‘ಸಲಾರ್’ ಮತ್ತು ‘ಆದಿಪುರುಷ್’ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್, ಅಕ್ಟೋಬರ್ ಹೊತ್ತಿಗೆ ‘ಸಲಾರ್’ ಚಿತ್ರದ ಚಿತ್ರೀಕರಣ ಮುಗಿಸಿಕೊಳ್ಳಲಿದ್ದಾರಂತೆ. ಇನ್ನು, ‘ಆದಿಪುರುಷ್’ ಚಿತ್ರದ ಬಹುತೇಕ ಚಿತ್ರೀಕರಣ ಅಷ್ಟರಲ್ಲಿ ಮುಗಿಯಲಿದ್ದು, ಅಕ್ಟೋಬರ್ ನಂತರ ಪ್ರಭಾಸ್, ಈ ಹೊಸ ಚಿತ್ರದ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಾಂಡೋಮ್ ಗುಣಮಟ್ಟ ಪರೀಕ್ಷೆಗಿಳಿದ ನಟಿ ರಾಕುಲ್ ಪ್ರೀತ್!
ಇನ್ನು, ದೀಪಿಕಾ ಸಹ ಶಾರೂಖ್ ಖಾನ್ ಅಭಿನಯದ ‘ಪಠಾಣ್’ ಮತ್ತು ಹೃತಿಕ್ ರೋಶನ್ ಅಭಿನಯದ ‘ದಿ ಫೈಟರ್’ ಚಿತ್ರದ ಚಿತ್ರೀಕರಣ ಮುಗಿಸಿ, ಈ ಹೊಸ ಚಿತ್ರದಲ್ಲಿ ಪ್ರಭಾಸ್ಗೆ ಜೋಡಿಯಾಗಲಿದ್ದಾರೆ.
ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಇನ್ನಷ್ಟೇ ಹೊರಬೀಳಬೇಕಿದೆ.
ನಾವ್ಯಾರೂ ಆರಾಮಾಗಿಲ್ಲ.. ಪ್ಲೀಸ್ ಒಬ್ರಿಗೊಬ್ರು ಹೆಲ್ಪ್ ಮಾಡಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ