ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಯ ಒಟ್ಟು ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?

Virat-Kohli-Anushka-Sharma-750x450
Published on

ಮುಂಬೈ: ಕ್ರಿಕೆಟ್​ನಲ್ಲಿ ವಿರಾಟ್​ ವಿಶ್ವರೂಪ ತೋರಿಸುತ್ತಿದ್ದಾರೆ. ಇತ್ತ ನಟಿ ಅನುಷ್ಕಾ ಶರ್ಮಾ ಬಾಲಿವುಡ್​ನಲ್ಲಿ ಬೇಡಿಕೆಯ ನಟಿ. ಹೀಗಿರುವ ಈ ಸ್ಟಾರ್​ ಜೋಡಿಯ ಒಟ್ಟು ನಿವ್ವಳ ಆಸ್ತಿ ಮೌಲ್ಯ ಎಷ್ಟಿರಬಹುದೆಂಬ ಸಹಜ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಆ ಕುತೂಹಲಕ್ಕೆ ಒಂದಷ್ಟು ಅಂಕಿ ಅಂಶಗಳೀಗ ಸಿಕ್ಕಿವೆ. ಜಿಕ್ಯೂ ಮ್ಯಾಗಜೀನ್ ಅದನ್ನು ಬೆಳಕಿಗೆ ತಂದಿದೆ.

2019ರಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ವಿವಿದ ಜಾಹೀರಾತು ಮತ್ತು ಬ್ರಾಂಡ್​ಗಳಿಂದ ಒಟ್ಟಾರೆ 250ಕ್ಕೂ ಅಧಿಕ ಕೋಟಿ ರೂ. ಪಡೆದಿದ್ದಾರೆ. ಮಿಂಟ್ರಾ, ಉಬರ್, ಪೂಮಾ, ಆಡಿ, ಎಂಆರ್​ಎಫ್​, ಮನ್ಯಾವರ್, ಒನ್ 8 ಸೇರಿ ಹಲವು ಬ್ರಾಂಡ್​ಗಳಿಗೆ ಕೊಹ್ಲಿ ರಾಯಭಾರಿಯಾಗಿದ್ದಾರೆ. ಇದನ್ನು ಹೊರತುಪಡಿಸಿದರೆ, ಎರಡು ಐಶಾರಾಮಿ ರೆಸ್ಟೊರಂಟ್​ಗಳೂ ಕೊಹ್ಲಿ ಹೆಸರಿನಲ್ಲಿವೆ.

ಅಷ್ಟೇ ಅಲ್ಲ ಬಿಸಿಸಿಐ ವಾರ್ಷಿಕ 7 ಕೋಟಿ ಸಂಬಳವನ್ನೂ ವಿರಾಟ್​ಗೆ ನೀಡುತ್ತದೆ. ಐಪಿಎಲ್​ನಿಂದಲೂ ಪ್ರತಿ ವರ್ಷ ಸಂಭಾವನೆ ರೂಪದಲ್ಲಿ 17 ಕೋಟಿ ಕೊಹ್ಲಿ ಬೊಕ್ಕಸಕ್ಕೆ ಬಂದು ಬೀಳುತ್ತದೆ. ಇದೆಲ್ಲವನ್ನು ಲೆಕ್ಕಹಾಕುವುದಾದರೆ, ಕೊಹ್ಲಿಯ ನಿವ್ವಳ ಆಸ್ತಿ 900 ಕೋಟಿಗೂ ಅಧಿಕವಿದೆ ಎಂದು ಜಿಕ್ಯೂ ಮ್ಯಾಗಜೀನ್ ತಿಳಿಸಿದೆ.

ಇನ್ನು ಅನುಷ್ಕಾ ಶರ್ಮಾ ಬಗ್ಗೆ ಹೇಳುವುದಾದರೆ, ಹೆರಿಗೆ ಬಳಿಕ ಸಿನಿಮಾದಿಂದ ಕೊಂಚ ದೂರ ಉಳಿದಿದ್ದರೂ, ಜಾಹೀರಾತು ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ ನಟಿ ಅನುಷ್ಕಾ ಶರ್ಮಾ. ಬಾಲಿವುಡ್​ನಲ್ಲಿಯೂ ಇಂದಿಗೂ ಬೇಡಿಕೆಯಲ್ಲಿದ್ದಾರೆ. ಈ ಮೊದಲೇ ಪ್ರತಿ ಸಿನಿಮಾಕ್ಕೆ 12 ರಿಂದ 15 ಕೋಟಿ ಸಂಭಾವನೆ ಅನುಷ್ಕಾ ಪಾಲಾಗುತ್ತಿತ್ತು. ಇದರ ಜತೆಗೆ ರಜನಿಗಂಧ, ಲೆವಿ, ನಿವಿಯಾ, ಮನ್ಯಾವರ್, ಮಿಂಟ್ರಾ ಸೇರಿ ಸಾಕಷ್ಟು ಬ್ರಾಂಡ್​ಗಳು ಅನುಷ್ಮಾ ಮುಖವಾಗಿದ್ದಾರೆ. ನಷ್ ಎಂಬ ಫ್ಯಾಷನ್ ಕಂಪನಿಯನ್ನೂ ಹೊಂದಿದ್ದಾರೆ. ಒಟ್ಟಾರೆಯಾಗಿ 350 ಕೋಟಿಯ ಆಸ್ತಿಯ ಒಡತಿಯಾಗಿದ್ದಾರೆ. ಒಟ್ಟಾರೆಯಾಗಿ ಈ ಇಬ್ಬರು ಸ್ಟಾರ್ ದಂಪತಿ 1250 ಕೋಟಿಗೂ ಅಧಿಕ ಆಸ್ತಿಯ ಒಡೆಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net