More

    ಕಾರಡ್ಕ ಸೊಸೈಟಿ ವಂಚನೆ ಪ್ರಕರಣದಲ್ಲಿ ಮೂವರ ಬಂಧನ

    ವಿಜಯವಾಣಿ ಸುದ್ದಿಜಾಲ ಕಾಸರಗೋಡು

    ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಆಪರೇಟಿವ್ ಸೊಸೈಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಸೂತ್ರಧಾರ, ಸಹಕಾರಿ ಸಂಘದ ಕಾರ್ಯದರ್ಶಿ, ಕರ್ಮಂತೋಡಿ ನಿವಾಸಿ ಕೆ.ರತೀಶ್‌ನ ಸಹಚರರಾದ ನೆಲ್ಲಿಕ್ಕಾಟ್ ನಿವಾಸಿ ಅನಿಲ್ ಕುಮಾರ್, ಪರಕ್ಲಾಯಿ ನಿವಾಸಿ ಗಫೂರ್ ಹಾಗೂ ಮವ್ವಲ್ ನಿವಾಸಿ ಬಶೀರ್ ಬಂಧಿತರು.

    ಈ ಮೂರು ಮಂದಿಯ ಹೆಸರಲ್ಲಿ ಚಿನ್ನಾಭರಣ ಅಡವಿರಿಸಿ ರತೀಶನ್ ಭಾರಿ ಮೊತ್ತದ ಹಣ ಪಡೆದಿದ್ದ. ಅಡವಿರಿಸಿದ ಚಿನ್ನದ ಸಾಚಾತನದ ಬಗ್ಗೆಯೂ ಇದೀಗ ಸಂಶಯ ಉಂಟಾಗಿದೆ. ಬಂಧಿತ ಬಶೀರ್ ಪಳ್ಳಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಮುಸ್ಲಿಂಲೀಗ್‌ನ ಚುನಾಯಿತ ಸದಸ್ಯ. ಇವರಿಗೆ ರತೀಶ್ ಮೂಲಕವೇ ಹಣ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಲಾಗಿದೆ.

    ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದ್ದು, ಡಿವೈಎಸ್‌ಪಿ ಶಿಬು ಪಾಪಚ್ಚನ್ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸುತ್ತಿದೆ. ಕರ್ನಾಟಕಕ್ಕೆ ಪರಾರಿಯಾಗಿದ್ದ ರತೀಶನ್, ಅಲ್ಲಿಂದ ಗೋವಾಕ್ಕೆ ತೆರಳಿರುವ ಬಗ್ಗೆ ಮಾಹಿತಿಯಿದೆ. ನಕಲಿ ದಾಖಲೆ ತಯಾರಿಸಿ ಬ್ಯಾಂಕಿಗೆ 4.76 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ. ಬೆಂಗಳೂರು ಹಾಗೂ ವಯನಾಡಿನಲ್ಲಿ ರತೀಶ್ ಜಾಗ ಖರೀದಿಸಿರುವ ಬಗ್ಗೆಯೂ ಮಾಹಿತಿಯಿದೆ. ಪ್ರಾಥಮಿಕ ಪರಿಶೋಧನೆಯಿಂದ 4,75,99,907 ರೂ. ಮೊತ್ತದ ವಂಚನೆ ಪತ್ತೆಹಚ್ಚಲಾಗಿದೆ. ಇದರಲ್ಲಿ ಚಿನ್ನಾಭರಣ ಪಡೆಯದೆ ಏಳು ಲಕ್ಷ ರೂ. ಸಾಲ ನೀಡಿರುವುದನ್ನೂ ಪತ್ತೆಹಚ್ಚಲಾಗಿದೆ. 2024 ಜನವರಿಯಿಂದ ತೊಡಗಿ ವಿವಿಧ ದಿನಗಳಲ್ಲಿ ಹಣ ಸಾಲವಾಗಿ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts