More

    ಆನ್​ಲೈನ್​ನಲ್ಲಿ ಐಸ್​ಕ್ರೀಮ್​ ಆರ್ಡರ್​ ಮಾಡಿದ ಮಹಿಳೆಗೆ ಕಾದಿತ್ತು ಶಾಕ್​! ಕೋನ್​ ಒಳಗಿತ್ತು ಮನುಷ್ಯನ ಬೆರಳು

    ಮುಂಬೈ: ಈ ಆಧುನಿಕ ಜೀವನದಲ್ಲಿ ಎಲ್ಲವು ಆನ್​ಲೈನ್​ಮಯವಾಗಿದೆ. ಏನೇ ಖರೀದಿ ಮಾಡಬೇಕೆಂದರೂ ಜನರು ಆನ್​ಲೈನ್ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವುದು ಸಹ ಕೆಲವರಿಗೆ ವಿರಳವಾಗಿಬಿಟ್ಟಿದೆ. ಏಕೆಂದರೆ, ಆಹಾರವೂ ಕೂಡ ಇದೀಗ ಸುಲಭವಾಗಿ ಮನೆ ಬಾಗಿಲಿಗಿ ಬರುತ್ತಿದೆ. ಆದರೆ, ಈ ಆನ್​ಲೈನ್​ ಆಹಾರಗಳನ್ನು ತಿನ್ನುವಾಗ ತುಂಬಾ ಎಚ್ಚರಿಕೆಯನ್ನು ವಹಿಸಬೇಕು. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.

    ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಕೋನ್​ ಐಸ್​ಕ್ರೀಮ್​ನಲ್ಲಿ ಮಾನವನ ಬೆರಳನ್ನು ನೋಡಿ ಮಹಿಳೆಯೊಬ್ಬಳು ಶಾಕ್​ ಆಗಿರುವ ಘಟನೆ ಮುಂಬೈನ ಮಲಾಡ್​ ಏರಿಯಾದಲ್ಲಿ ನಡೆದಿದೆ. ಆಘಾತಕ್ಕೊಳಗಾದ ಮಹಿಳೆ ಮಲಾಡ್ ಪೊಲೀಸರನ್ನು ಸಂಪರ್ಕಿಸಿದ್ದು, ಐಸ್ ಕ್ರೀಮ್ ತಯಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ದೂರು ದಾಖಲಿಸಿದ ಬಳಿಕ ಪೊಲೀಸರು, ಬೆರಳು ಯಾರದ್ದು? ಐಸ್​ಕ್ರೀಮ್​ ಕೋನ್​ನಲ್ಲಿ ಹೇಗೆ ಬಂತು? ಎಂದು ತಿಳಿದುಕೊಳ್ಳಲು ಐಸ್ ಕ್ರೀಮ್ ಕೋನ್ ಮತ್ತು ಮಾನವ ಬೆರಳಿನ ಅಂಗವನ್ನು ವಿಧಿವಿಜ್ಞಾನ ತನಿಖೆಗೆ ಕಳುಹಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.

    ಈ ಬಗ್ಗೆ ಮಾತನಾಡಿರುವ ಮಲಾಡ್​ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಐಸ್ ಕ್ರೀಮ್​ನಲ್ಲಿ ಪತ್ತೆಯಾದ ಮಾನವ ಅಂಗವನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್​)

    ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಔಟಾದಾಗ ನೀವಿದನ್ನು ಗಮನಿಸಿದ್ರಾ? ಲೈವ್​ನಲ್ಲೂ ಈ ದೃಶ್ಯವನ್ನು ತೋರಿಸಿಲ್ಲ!

    ನಟ ದರ್ಶನ್​ನಿಂದ ಚಿಕಿತ್ಸೆಗೆ ಸಿಗದ ಸಹಾಯ: ಹಲವು ವರ್ಷಗಳಿಂದ ಹಾಸಿಗೆ ಹಿಡಿದಿರುವ ಫಾರ್ಮ್​ಹೌಸ್ ಕೆಲಸಗಾರ

    See also  ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts