ತಾನು ತೊಟ್ಟ ಬಟ್ಟೆಯನ್ನೇ ಮಾರಾಟ ಮಾಡಿ ತಿಂಗಳಿಗೆ 4 ಲಕ್ಷ ರೂಪಾಯಿ ದುಡಿಯುವ ಬೆಡಗಿ

cloth
Published on

ವಾಷಿಂಗ್ಟನ್: ಎಂತೆದ್ದದ್ದೋ ಬಿಜಿನೆಸ್​ ಬಗ್ಗೆ ತಿಳಿದುಕೊಂಡಿರುತ್ತೀರಿ. ಆದರೆ ಕೆಲವು ಕಡೆ ತೀರಾ ವಿಶೇಷವೆನಿಸುವ ಬಿಜೆನೆಸ್ ಕೂಡ ಚಾಲ್ತಿಯಲ್ಲಿವೆ. ಅದೇ ರೀತಿ ಇಲ್ಲೊಬ್ಬ ಮಹಿಳೆ ತಾನು ತೊಟ್ಟ ಬಟ್ಟೆಯನ್ನೇ ಮಾರಾಟ ಮಾಡಿ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಮೆ ಮಾಡುತ್ತಾಳಂತೆ.

ಅಮೆರಿಕ ಮೂಲದ ಆ ಯುವತಿ ಇಂತದ್ದೊಂದು ಬಿಜಿನೆಸ್​ ಆರಂಭಿಸುವಾಗ ಆಕೆಗಿನ್ನೂ 22 ವರ್ಷ ವಯಸ್ಸಾಗಿತ್ತಂತೆ. ವೆಬ್​ಸೈಟ್​ ಒಂದರಲ್ಲಿ ನೋಡಿದಾಗ ಹೆಣ್ಣು ಮಕ್ಕಳು ತಾವು ಬಳಸಿದ ಅಂಡರ್​ವೇರ್​ ಅನ್ನೂ ಮಾರಾಟ ಮಾಡುವುದನ್ನು ಕಂಡು ಆಶ್ಚರ್ಯ ಪಟ್ಟಿದ್ದಳಂತೆ. ಅದಾದ ಮೇಲೆ ತಾನೂ ಅಂತದ್ದೊಂದು ಬಿಜಿನೆಸ್​ ಆರಂಭಿಸುವ ಯೋಚನೆ ಮಾಡಿ, ಅದರಂತೆ ತನ್ನ ಪ್ರೊಫೈಲ್​ ತಯಾರಿಸಿಕೊಂಡಿದ್ದಾಳೆ.

ಕೇವಲ ಬಾಯ್​ಫ್ರೆಂಡ್​ಗೆ ಮಾತ್ರವೇ ತನ್ನ ಧಿರಿಸಿನ ಫೋಟೋ ಕಳುಹಿಸುತ್ತಿದ್ದ ಯುವತಿಗೆ ಈ ರೀತಿ ಸಾಮಾಜಿಕವಾಗಿ ತನ್ನ ಫೋಟೋ ಹಂಚಿಕೊಳ್ಳುವುದು ಮೊದ ಮೊದಲು ಕಷ್ಟವಾಗುತ್ತಿತ್ತಂತೆ. ಆಕೆಯ ಮೊದಲನೇ ಬಟ್ಟೆ ಬರೋಬ್ಬರಿ 7 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಅದಾದ ನಂತರ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಯುವತಿ ಪ್ರತಿ ತಿಂಗಳು ಒಂದಿಷ್ಟು ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಾಳೆ. ಆಕೆಯ ಫೋಟೋಗಾಗೇ ಕಾದು ಕೂರುವ ಜನರೂ ಇದ್ದಾರಂತೆ. ಸುಮಾರು 20ಕ್ಕೂ ಹೆಚ್ಚು ಮಂದಿ ರೆಗ್ಯುಲರ್​ ಕಸ್ಟಮರ್​ ಆಗಿದ್ದಾರೆ ಎನ್ನುತ್ತಾಳೆ ಆಕೆ. ಇದೀಗ ತಿಂಗಳಿಗೆ ಕನಿಷ್ಠ 1.5 ಲಕ್ಷ ರೂಪಾಯಿಯಿಂದ ಗರಿಷ್ಠ 4 ಲಕ್ಷ ರೂಪಾಯಿವರೆಗೆ ದುಡಿಮೆಯಾಗುತ್ತಿದೆಯಂತೆ. ಅಂದ ಹಾಗೆ ಬೇರೆಯೊಂದು ಕೆಲಸದಲ್ಲಿರುವ ಆಕೆ ಇದನ್ನು ಕೇವಲ ಸೈಡ್ ಬಿಜಿನೆಸ್​ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net