

ಅಹಮದಾಬಾದ್: ಐಪಿಎಲ್ ಪಂದ್ಯಕ್ಕಾಗಿ ಕೋಲ್ಕತ ನೈಟ್ರೈಡರ್ಸ್ ತಂಡ ಪ್ರಯಾಣಿಸುವ ವೇಳೆ ಆ್ಯಂಬುಲೆನ್ಸ್ಗೆ ತಡೆಯೊಡ್ಡಲಾಗಿತ್ತು ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜ್ರಾಪೋಲ್ ಕ್ರಾಸ್ರೋಡ್ ಟ್ರಾಫಿಕ್ ಜಂನ್ನಲ್ಲಿ ನಡೆದಿದೆ ಎನ್ನಲಾದ ಈ ಟನೆಯನ್ನು ಕಾರು ಚಾಲಕರೊಬ್ಬರು ವಿಡಿಯೋ ಮಾಡಿದ್ದಾರೆ.
17 ಸೆಕೆಂಡ್ಗಳ ಈ ವಿಡಿಯೋದಲ್ಲಿ ಪೊಲೀಸ್ ಎಸ್ಕಾರ್ಟ್ನೊಂದಿಗೆ ಕೆಕೆಆರ್ ತಂಡದ ಬಸ್ ಸಂಚರಿಸುವ ವೇಳೆ ಜೀಪ್ ಆ್ಯಂಬುಲೆನ್ಸ್ಗೆ ತಡೆಯೊಡ್ಡಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಇದೊಂದು ನಕಲಿ ವಿಡಿಯೋ ಆಗಿದ್ದು, ಪೊಲೀಸರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ಅಹಮದಾಬಾದ್ ಜಂಟಿ ಪೊಲೀಸ್ ಆಯುಕ್ತ ಮಯಾಂಕ್ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ಎಂದೂ ವಿಐಪಿಗಳ ಸಂಚಾರಕ್ಕಾಗಿ ಆ್ಯಂಬುಲೆನ್ಸ್ಗೆ ತಡೆಯೊಡ್ಡುವುದಿಲ್ಲ. ಅದು ಐಪಿಎಲ್ ಆಟಗಾರರೇ ಇರಲಿ ಅಥವಾ ಯಾವುದೇ ಸಚಿವರೇ ಆಗಿರಲಿ. ಇದೊಂದು ಸಣ್ಣ ಗೊಂದಲದ ಘಟನೆಯಾಗಿರಬಹುದು. ಪೊಲೀಸರ ವರ್ಚಸ್ಸಿಗೆ ಧಕ್ಕೆ ತರಲು ಇದನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.