ರಾಜ್ಯದಲ್ಲಿ ಇನ್ಮುಂದೆ ಸಿಗಲಿದೆ ಓಲಾ, ಊಬರ್‌ ರೀತಿ ಆ್ಯಂಬುಲೆನ್ಸ್ ಸೇವೆ; ಸರ್ಕಾರದಿಂದಲೇ ದರ ನಿಗದಿ| ambulance

ambulance
Published on

ambulance; ಇಷ್ಟು ದಿನ ನಾವೆಲ್ಲರೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಬೇಕೆಂದರೆ, ಓಲಾ, ಊಬರ್​ ಅಂತಹ ಅಪ್ಲಿಕೇಷನ್​ಗಳನ್ನು ಬಳಕೆ ಮಾಡುತಿದ್ದೆವು. ಆದರೆ ಇನ್ಮುಂದೆ ಆ್ಯಂಬುಲೆನ್ಸ್​​ನಲ್ಲೂ ಸಹ ಈ ರೀತಿಯ ಸೇವೆ ಸಿಗಲಿದೆ.

ಇನ್ನೂ ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದು, ಈ ಆ್ಯಂಬುಲೆನ್ಸ್‌ಗಳಿಗೆ ಸರ್ಕಾರವೇ ದರ ನಿಗದಿ ಮಾಡಲಿದೆ. ಅಗತ್ಯ ಇರುವವರು ಮೊಬೈಲ್‌ ಆ್ಯಪ್‌ ಬಳಸಿ ಅವುಗಳ ಸೇವೆ ಪಡೆಯಬಹುದಾಗಿದೆ ಎಂದಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿನ ವೈದ್ಯಕೀಯ ಆಂಬ್ಯುಲೆನ್ಸ್ ಸೇವೆಯನ್ನು ಇನ್ನು ಮುಂದೆ ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆ (ಕೆಪಿಎಂಇ) ಕಾನೂನಿನ ಅಡಿಯಲ್ಲಿ ಜಾರಿಗೆ ತರಲು ನಿರ್ಧರಿಸಿದ್ದು, ಈ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಕಾಯಿದೆ ಜಾರಿಗೆ ತರಲಾಗುವುದು ಎಂದಿದ್ದಾರೆ.

ಓಲಾ, ಊಬರ್‌ ಆ್ಯಪ್‌ ಬಳಸಿ ಟ್ಯಾಕ್ಸಿ ಹಾಗೂ ಆಟೋ ಬುಕ್‌ ಮಾಡುವಂತೆ ಇನ್ನು ಮುಂದೆ ರಾಜ್ಯದಲ್ಲಿ ಆ್ಯಂಬುಲೆನ್ಸ್‌ಗಳನ್ನು ಕೂಡ ನಮ್ಮ ಬಳಿ ಕರೆಸಬಹುದಾಗಿದೆ. ಈಗಾಗಲೇ ಗುರುಗ್ರಾಮದಲ್ಲಿ ಖಾಸಗಿ ಕಂಪನಿ ಈ ಸೇವೆಯನ್ನು ಆರಂಭಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಆ್ಯಂಬುಲೆನ್ಸ್‌ ಸೇವೆ ಕಲ್ಪಿಸಲು ಯೋಜನೆ ರೂಪಿಸಿದೆ.

(ಏಜೆನ್ಸೀಸ್)

ರಾಜ್ಯದಲ್ಲಿ ಅನೇಕ ಕಂಪನಿಗಳು ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದು, ಅವುಗಳ ಬಗ್ಗೆ ಸಾಕಷ್ಟು ದೂರುಗಳಿವೆ. ಹೀಗಾಗಿ ಆಂಬುಲೆನ್ಸ್ ಗಳಲ್ಲಿ ಯಾವ ವ್ಯವಸ್ಥೆ ಇರಬೇಕು. ದರ ಎಷ್ಟಿರಬೇಕು ಎಂಬುದನ್ನು ಸರ್ಕಾರದಿಂದ ಕಾಯ್ದೆ ರೂಪಿಸಲಾಗುವುದು. ಶಾಸನ ಜಾರಿಯಾದ ಬಳಿಕ ಅಂಬುಲೆನ್ಸ್ ಸೇವೆ ಒದಗಿಸುವವರು ಖಾಸಗಿ ಆಸ್ಪತ್ರೆಗಳ ರೀತಿ ನೋಂದಣಿ ಮಾಡಿಕೊಳ್ಳಬೇಕು. ಬೇಕಾಬಿಟ್ಟಿ ಹಣ ಪಡೆಯುವುದನ್ನು ತಪ್ಪಿಸಲು ಈ ರೀತಿಯ ವ್ಯವಸ್ಥೆ ತರಲಾಗುತ್ತಿದೆ ಎಂದು ಹೇಳಿದ್ದಾರೆ. ಈಗಿನ ವ್ಯವಸ್ಥೆಯಲ್ಲಿ ಕೇವಲ ಒಂದು ಬೆಡ್ ಇಟ್ಟುಕೊಂಡು ಅಂಬುಲೆನ್ಸ್ ನಡೆಸುವ ವಾಹನಗಳೂ ಇವೆ. ಹಾಗಾಗಿ ಅಂಬುಲೆನ್ಸ್​​ಗೆ ಮಾನದಂಡ ರೂಪಿಸಿದ್ದೇವೆ. ಜತೆಗೆ ಖಾಸಗಿ ಸಂಸ್ಥೆ ಮೂಲಕ ನಡೆಸುತ್ತಿರುವ 108 ಆರೋಗ್ಯ ಸೇವೆಯನ್ನು ಕೂಡ ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳುತ್ತೇವೆ. ಮುಂದೆ ಈ ವಾಹನಗಳು ಡಿಸಿ, ಸಿಇಒ, ಡಿಎಚ್‌ಒ ಕಂಟ್ರೋಲ್​ಗೆ ಬರಲಿವೆ ಎಂದು ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net