

fighter jet crashes : ಕ್ಯಾಲಿಫೋರ್ನಿಯಾದ ಕಿಂಗ್ಸ್ ಕೌಂಟಿಯಲ್ಲಿರುವ ಲೀಮೋರ್ ವಾಯು ನಿಲ್ದಾಣದ ಬಳಿ ಯುಎಸ್ ನೌಕಾಪಡೆಯ ಎಫ್-35 ಫೈಟರ್ ಜೆಟ್ ಅಪಘಾತಕ್ಕೀಡಾಗಿದೆ. ಇನ್ನೂ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ಆಗಮಿಸಿದ್ದಾರೆ. ಪೈಲಟ್ ಯಶಸ್ವಿಯಾಗಿ ವಿಮಾನದಿಂದ ಹೊರಕ್ಕೆ ಹಾರಿದ್ದು, ಸುರಕ್ಷಿತವಾಗಿದ್ದಾರೆ. ಯಾವುದೇ ಹೆಚ್ಚುವರಿ ಸಿಬ್ಬಂದಿ ಗಾಯಗೊಂಡಿಲ್ಲ ಎನ್ನಲಾಗಿದೆ.
ನೌಕಾಪಡೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ನಿನ್ನೆ(30) ಸಂಜೆ ಮಧ್ಯ ಕ್ಯಾಲಿಫೋರ್ನಿಯಾದಲ್ಲಿ ಯುಎಸ್ ನೌಕಾಪಡೆಯ ಎಫ್-35 ಫೈಟರ್ ಜೆಟ್ ಅಪಘಾತಕ್ಕೀಡಾಯಿತು ಎನ್ನಲಾಗಿದೆ. ಡಿಕ್ಕಿ ಹೊಡೆದ ತಕ್ಷಣ ವಿಮಾನ ಬೆಂಕಿಗೆ ಆಹುತಿಯಾಗಿದೆ. ಇನ್ನೂ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರೀ ಪ್ರಮಾಣದ ಬೆಂಕಿಯಿಂದ ದಟ್ಟ ಹೊಗೆ ಹೊರಬರುತ್ತಿರುವುದನ್ನು ಕಾಣಬಹುದಾಗಿದೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ.
(ಏಜೆನ್ಸೀಸ್)
ವಿಮಾನವು ಸ್ಟ್ರೈಕ್ ಫೈಟರ್ ಸ್ಕ್ವಾಡ್ರನ್ VF-125 ಗೆ ಸೇರಿದ್ದು, ಇದನ್ನು "ರಫ್ ರೈಡರ್ಸ್" ಎಂದೂ ಕರೆಯುತ್ತಾರೆ. ನೌಕಾಪಡೆಯ ಪೈಲಟ್‌ಗಳು ಮತ್ತು ಏರ್‌ಕ್ರ್ಯೂಗಳಿಗೆ ಮುಂಚೂಣಿಯ ನಿಯೋಜನೆಗಳಿಗಾಗಿ ತರಬೇತಿ ನೀಡಲು ಇದನ್ನು ಬಳಸಲಾಗುತ್ತದೆ. ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ಆಗಮಿಸಿ, ಅಪಘಾತದ ಕಾರಣವನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ.