ಮಹಿಳೆಗೆ ಹೃದಯಾಘಾತ: ಶವದ ಮೇಲಿದ್ದ 2 ಚಿನ್ನದ ಬಳೆ ನಾಪತ್ತೆ; ಆಗಿದ್ದೇನು?

Gold Bangles
ಸಾಂದರ್ಭಿಕ ಚಿತ್ರ
Published on

ಥಾಣೆ: ಮಹಿಳೆಯೊಬ್ಬಳು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದರೂ ಆಕೆಯ ಮೈಮೇಲಿದ್ದ ಎರಡು ಚಿನ್ನದ ಬಳೆಗಳನ್ನು ಕದ್ದ ಪ್ರಕರಣವೊಂದು ನಡೆದಿದೆ. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಥಾಣೆಯ ಮೀರಾ ಭಯಂದರ್​ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ 85 ವರ್ಷದ ಮಹಿಳೆ ಜೆಹ್ರುಬಿ ಶೇಖ್ ಎಂಬಾಕೆ ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಈಕೆಯ ಪುತ್ರ ಆ್ಯಂಬುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ ಮಹಿಳೆ ಅದಾಗಲೇ ಮೃತಪಟ್ಟಿದ್ದಾಗಿ ಆಸ್ಪತ್ರೆಯಲ್ಲಿನ ವೈದ್ಯರು ತಿಳಿಸಿದ್ದರು. ಹೀಗಾಗಿ ಮಹಿಳೆಯ ಶವವನ್ನು ಮನೆಗೆ ತಂದು ನೋಡಿದಾಗ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳು ಕಾಣೆಯಾಗಿದ್ದು ಕಂಡುಬಂದಿತ್ತು.

ತಾಯಿಯ ಕೈಯಲ್ಲಿದ್ದ 28 ಸಾವಿರ ರೂ. ಮೌಲ್ಯದ 2 ಬಳೆಗಳು ಕಾಣೆಯಾಗಿವೆ ಎಂದು ಪುತ್ರ ಪೊಲೀಸರಿಗೆ ದೂರು ನೀಡಿದ್ದ. ಈ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಆ್ಯಂಬುಲೆನ್ಸ್ ಸಿಬ್ಬಂದಿಯೇ ಕದ್ದಿರುವುದು ಎಂಬುದು ತಿಳಿದು ಬಂದಿದೆ. ಆತ ಅದನ್ನು ವಿರಾರ್​ನ ಒಂದು ಅಂಗಡಿಯಲ್ಲಿ ಮಾರಿದ್ದು, ಪೊಲೀಸರು ಬಳೆಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net