

ದಾವಣಗೆರೆ: ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟ ರೋಗಿಯ ಶವವನ್ನು ಚಾಲಕ ಮಾರ್ಗಮಧ್ಯೆಯೇ ರಸ್ತೆ ಪಕ್ಕ ಮಲಗಿಸಿಟ್ಟು ಹೋದ ಅಮಾನವೀಯ ಘಟನೆ ಹೊನ್ನಾಳಿಯ ಮಾದನಬಾವಿಯಲ್ಲಿ ನಡೆದಿದೆ.
ಅರಬಗಟ್ಟೆ ಗ್ರಾಮದ ದೊಡ್ಡಪ್ಪ(70) ಮೃತ ವ್ಯಕ್ತಿ. ಇಂದು ಬೆಳಗ್ಗೆ 11ಗಂಟೆಗೆ ಅನಾರೋಗ್ಯದಿಂದ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ದರಿಂದ, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: 18,000 ಅಡಿ ಎತ್ತರದಲ್ಲಿ ‘ಸ್ಕೈ’ ಗೆ ಜನ್ಮ ನೀಡಿದ ಮಹಿಳೆ…
ಆದರೆ ಮಾದನಬಾವಿ ಬಳಿ ಹೋಗುತ್ತಿದ್ದಂತೆ ದೊಡ್ಡಪ್ಪ ಮೃತಪಟ್ಟಿದ್ದಾರೆ. ಆಗ ಚಾಲಕ ಶವವನ್ನು ಆಂಬುಲೆನ್ಸ್ನಿಂದ ಕೆಳಗಿಳಿಸಿ ಹೋಗಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಂಬುಲೆನ್ಸ್ ಚಾಲಕನನ್ನು ಬಂಧಿಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ, ತಹಸೀಲ್ದಾರ್ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದರು.