

ಯುಎಸ್ನ ಮಹಿಳೆಯೋರ್ವರು ತನ್ನ ಮಗನಿಗೆ ಸ್ಕೈ ಎಂದು ಹೆಸರಿಟ್ಟಿದ್ದಾರೆ. ಆದರೆ ಇದರ ಹಿಂದೊಂದು ಕಾರಣವಂತೂ ಖಂಡಿತ ಇದೆ.
ಯುಎಸ್ನ ಗ್ನೆಲಾನಿಲ್ ಎಂಬ ಪುಟ್ಟ ಪ್ರದೇಶದಿಂದ ಕ್ರಿಸ್ಟಲ್ ಹಿಕ್ಸ್ ಎಂಬ ಗರ್ಭಿಣಿಯನ್ನು ವಿಮಾನದಲ್ಲಿ ಅಲಸ್ಕಾದಲ್ಲಿರುವ ಅಂಕರೇಜ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಕೆ ವಿಮಾನ ಹತ್ತಿದ ಒಂದು ತಾಸಿನಲ್ಲಿಯೇ, ಹೆರಿಗೆಯಾಗಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ಕ್ರಿಸ್ಟಲ್ ಹಿಕ್ಸ್ ಮೊದಲ ಬಾರಿ ವಿಮಾನ ಹತ್ತಿದ್ದರು ಹಾಗೂ ಆಗಲೇ ಮಗುವಿಗೂ ಜನ್ಮ ನೀಡಿದ್ದಾರೆ. ಇದು ಸಂಪೂರ್ಣ ಹೊಸ ಅನುಭವ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ನನಗೆ ವಿಮಾನದ ಮೇಲೆ ಹೆರಿಗೆಯಾಗಿದ್ದು ತುಂಬ ನಾಚಿಕೆ ತಂದಿದೆ ಎಂದೂ ಕೂಡ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ, ಟ್ರಂಪ್ಗಿಂತ ಫೇಮಸ್ ಆಗ್ಬಿಟ್ಟಿದ್ದಾರಂತೆ ಸುಶಾಂತ್ …
ನಂತರ ಹಿಕ್ಸ್ ಹಾಗೂ ಆಕೆಯ ಮಗನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆರಿಗೆಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದಾಗಲೇ ಹಿಕ್ಸ್ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ಮಗುವನ್ನು ಆಕ್ಸಿಜನ್ ಸಪೋರ್ಟ್ನಲ್ಲಿ ಇಡಲಾಗಿದೆ.
ಆಕಾಶ ಮಧ್ಯೆ, ವಿಮಾನದಲ್ಲಿ ಹುಟ್ಟಿದ ಮಗುವಿಗೆ ಅಷ್ಟೇ ವಿಶಿಷ್ಟವಾಗಿ ಸ್ಕೈ ಎಂದು ಈಕೆ ಹೆಸರಿಟ್ಟಿದ್ದಾರೆ. ಆದರೆ ಮಗುವಿನ ಜನ್ಮಸ್ಥಳದ ಹೆಸರನ್ನು ಬರ್ತ್ ಸರ್ಟಿಫಿಕೇಟ್ನಲ್ಲಿ ಉಲ್ಲೇಖಿಸುವಾಗ ತುಂಬ ಗೊಂದಲಕ್ಕೀಡಾಗಿದ್ದರು. ಆಕಾಶ ಎಂದಾಗಲೀ, ವಿಮಾನವೆಂದಾಗಲೀ ಬರೆಯಲಾಗದು ಎಂಬ ಕಾರಣಕ್ಕೆ ಅಂಕರೇಜ್ ಆಸ್ಪತ್ರೆ ಎಂದು ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್)