

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ, ಬುದ್ಧಿವಂತಿಕೆ ಇನ್ನೊಂದು ಹೆಸರೇ ಆಚಾರ್ಯ ಚಾಣಕ್ಯ. ಅವರನ್ನು ನೀತಿಶಾಸ್ತ್ರ ಮತ್ತು ರಾಜತಾಂತ್ರಿಕತೆ ಮುಂತಾದ ವಿಷಯಗಳಲ್ಲಿ ಪರಿಣಿತರು ಎಂದು ಪರಿಗಣಿಸಲಾಗಿದೆ.
ಇನ್ನು ಮನುಷ್ಯ ಹೇಗೆ ಬದುಕಬೇಕು? ಎಲ್ಲರ ಮುಂದೆ ಹೇಗೆರಬೇಕು? ಕಣ್ಣಮುಂದೆ ಇರುವ ಕಠಿಣ ಪರಿಸ್ಥಿತಿಗಳನ್ನು ಎದುರಿಸೊದೇಗೆ? ವ್ಯಕ್ತಿಯು ಯಶಸ್ಸಿನ ಏಣಿಯನ್ನು ಏರುವುದು ಮಾತ್ರವಲ್ಲದೆ ತೊಂದರೆಗಳಿಂದ ದೂರವಿರುವ ಮೂಲಕ ಸಂತೋಷ ಮತ್ತು ಶಾಂತಿಯುತ ಜೀವನವನ್ನು ನಡೆಸಬಹುದು ಎಂಬುದರ ಬಗ್ಗೆ ಉಲ್ಲೇಖಿಸಿದ್ದಾರೆ.
ಒಬ್ಬ ವ್ಯಕ್ತಿಯು ಎಷ್ಟೇ ಬುದ್ಧಿವಂತನಾಗಿದ್ದರೂ, ಈ ಜಗತ್ತಿನಲ್ಲಿ ಕೆಲ ಜನರ ಮುಂದೆ ಮೌನವಾಗಿರುವುದು ಮತ್ತು ಮುಂದುವರಿಯುವುದು ಉತ್ತಮ ಏಕೆಂದರೆ ಅಂತಹ ಜನರೊಂದಿಗೆ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಚಾಣಕ್ಯ ತಮ್ಮ ನೀತಿಯಲ್ಲಿ ಹೇಳಿದ್ದಾರೆ.
ಅಚಾರ್ಯ ಚಾಣಕ್ಯ ನೀತಿಯ ಪ್ರಕಾರ, ಅಧಿಕಾರದ ವ್ಯಮೋಹದಲ್ಲಿರುವ ವ್ಯಕ್ತಿಗೆ ಇಡೀ ಜಗತ್ತು ಅವನ ಮುಷ್ಠಿಯಲ್ಲಿರುವಂತೆ ಭಾಸವಾಗುತ್ತದೆ. ಅಂತಹ ವ್ಯಕ್ತಿಯು ಪ್ರತಿಯೊಬ್ಬರನ್ನು ತನ್ನ ಇಚ್ಚೆಯಂತೆ ವರ್ತಿಸಲು ಬಯಸುತ್ತಾನೆ. ಇಂತಹ ವ್ಯಕ್ತಿಯ ಜತೆ ಎಂದಿಗೂ ವಾದ ಮಾಡಬಾರದು. ಈ ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಕಾಲ. ಕಾಲ ಕಳೆದಂತೆ ಎಲ್ಲವನ್ನು ತಲೆಕೆಳಗೆ ಮಾಡುತ್ತದೆ ಎಂದು ಅಧಿಕಾರದ ಅಮಲಿನಲ್ಲಿರುವ ವ್ಯಕ್ತಿಗೆ ತಿಳಿಯುದೇ ಇಲ್ಲ.
ಅಚಾರ್ಯ ಚಾಣಕ್ಯ ನೀತಿಯ ಪ್ರಕಾರ, ಸಣ್ಣ ಮನಸ್ಥಿತಿ ಹೊಂದಿರುವ ವ್ಯಕ್ತಿಯು ಜೀವನವನ್ನು ಪ್ರಾಯೋಗಿಕ ರೀತಿಯಲ್ಲಿ ನೋಡುವುದಿಲ್ಲ. ಬದಲಾಗಿ ಧರ್ಮ ಅಥವಾ ಪದ್ಧತಿಗಳ ಮೂಲಕ ನೋಡುತ್ತಾನೆ. ಅಂತಹ ಜನರು ತಮ್ಮ ಸಂಕುಚಿತ ಮನಸ್ಥಿತಿಯನ್ನು ಸಾರ್ವತ್ರಿಕ ಸತ್ಯವೆಂದು ಪರಿಗಣಿಸುತ್ತಾರೆ. ಆದ್ದರಿಂದ, ಅಂತಹ ಜನರೊಂದಿಗೆ ವಾದ ಮಾಡುವ ಬದಲು, ನೀವು ಮೌನವಾಗಿರಿ ಮತ್ತು ನಿಮ್ಮ ಕೆಲಸದ ಮೇಲೆ ಗಮನಹರಿಸಬೇಕು.
3.ದುರಂಕಾರಿಗಳ ಮುಂದೆ ಮೌನ
ಅಚಾರ್ಯ ಚಾಣಕ್ಯ ನೀತಿಯ ಪ್ರಕಾರ, ದುರಂಕಾರಿಗಳ ಮುಂದೆ ಯಾವಗಲೂ ಮೌನವಹಿಸಿವುದು ಒಳಿತು ಎಂದು ಚಾಣಕ್ಯ ನೀತಿ ಹೇಳುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಸೌಂದರ್ಯ, ಸಂಪತ್ತು, ಮನೆ, ಜನಪ್ರಿಯತೆ, ಕೆಲಸ, ಉನ್ನತ ಸ್ಥಾನ, ಜಾತಿ, ವಂಶಾವಳಿ ಇತ್ಯಾದಿಗಳ ಬಗ್ಗೆ ಹೆಮ್ಮೆ ಪಡಬಹುದು. ಆದರೆ, ಅಹಂಕಾರವು ಅಂತಿಮವಾಗಿ ವ್ಯಕ್ತಿಯನ್ನು ಅವನತಿಗೆ ಕೊಂಡೊಯ್ಯುತ್ತದೆ. ಹೀಗಾಗಿ, ದುರಂಕಾರಿಗಳ ಎದುರು ವಾದದಿಂದ ದೂರ ಇರಬೇಕು.
ಆಚಾರ್ಯ ಚಾಣಕ್ಯರ ಪ್ರಕಾರ, ಅಸೂಯೆ ಜನರು ಸ್ವತಃ ಕೀಳರಿಮೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರ ಆತ್ಮವಿಶ್ವಾಸವು ಅಲುಗಾಡುತ್ತದೆ. ನೀವು ಯಾವುದೇ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಅಂತಹ ಜನರ ಮುಂದೆ ವ್ಯಕ್ತಪಡಿಸಿದರೆ, ಅವರು ವಿಷಯವನ್ನು ಅರ್ಥಮಾಡಿಕೊಳ್ಳುವ ಬದಲು ತಪ್ಪುಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಹೀಗಾಗಿ ಅಂತ ಜನರಿಂದ ದೂರು ಇರಿ.
5. ತಮ್ಮನ್ನು ತಾವೇ ಬುದ್ಧಿವಂತರು ಎಂದವರಿಂದ ದೂರ ಇರಿ
ಈ ಜಗತ್ತಿನಲ್ಲಿ ಇಡೀ ಪ್ರಪಂಚದ ಜ್ಞಾನವನ್ನು ಪಡೆದ ಯಾವುದೇ ವ್ಯಕ್ತಿ ಇಲ್ಲ, ಆದರೆ ಇನ್ನೂ ಅನೇಕ ಜನರು ತಮ್ಮನ್ನು ತಾವು ಶ್ರೇಷ್ಠರೆಂದು ಪರಿಗಣಿಸುತ್ತಾರೆ. ಆದ್ದರಿಂದ ಅಂತಹ ಜನರೊಂದಿಗೆ ವಾದ ಮಾಡುವ ಬದಲು, ಅವರನ್ನು ತಮ್ಮ ತಪ್ಪು ಕಲ್ಪನೆಗಳಲ್ಲಿ ಬದುಕಲು ಬಿಡಬೇಕು.(ಏಜೆನ್ಸೀಸ್)