ಬಾಬಾ ವಂಗಾ, ನಾಸ್ಟ್ರಾ ಡಾಮಸ್​ ನುಡಿದ ಭವಿಷ್ಯ ಒಂದೇ; 2025ರಲ್ಲಿ ಕಾದಿದೆಯಂತೆ ದೊಡ್ಡ ವಿಪತ್ತು! | Baba Vanga

dk-2025-04-16t181001421-67ffa52c2ad1d
Published on

Baba Vanga : ಭವಿಷ್ಯದ ಬಗ್ಗೆ ಹೇಳುವ ಬಾಬಾ ವಂಗಾ ಬಗ್ಗೆ ಕೇಳಿಯೇ ಇರ್ತಿರಾ ಅಲ್ವಾ ಅವರು ಹೇಳಿದ ಭವಿಷ್ಯ ಸಾಮಾನ್ಯವಾಗಿ ಬಹುತೇಕ ಸಂಭವಿಸಿವೆ. ಇದೀಗ ಬಾಬಾ ವಂಗಾ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಈ ವರ್ಷದಲ್ಲಿ ದೊಡ್ಡ ವಿಪತ್ತು ಸಂಭವಿಸಸಿದೆ ಎಂದಿದ್ದಾರೆ.ಅಲ್ಲದೆ, ಭವಿಷ್ಯಕಾರ ನಾಸ್ಟ್ರಾಡಾಮಸ್​ ಕೂಡ ಇದೇ ಭವಿಷ್ಯವನ್ನು ನುಡಿದಿದ್ದಾರೆ.

ಅಂದಹಾಗೆ 2025 ದೊಡ್ಡ ವಿಪತ್ತು ಜರುಗುತ್ತದೆ ಎಂದು ಬಲ್ಲೇರಿಯನ್‌ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಬಹಳ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದಾರೆ. 2025ರ ವರ್ಷದಲ್ಲಿ ಏನೆಲ್ಲಾ ಸಂಭವಿಸಲಿದೆ ಎಂಬುದನ್ನು ತಿಳಿದುಕೊಳ್ಳುವ ಮುನ್ನ ಬಾಬಾ ವಂಗಾರ ಕಿರು ಪರಿಚಯ ಮಾಡಿಕೊಳ್ಳೋಣ.

ಬಲ್ಲೇರಿಯನ್‌ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ನಾಸ್ಟ್ರಾಡಾಮಸ್​, ಬಾಬಾ ವಂಗಾ 2025ರ ಭವಿಷ್ಯದ ಬಗ್ಗೆ ಹೇಳಿದ್ದೇನು.?

ಈ ಇಬ್ಬರ ಭವಿಷ್ಯಕಾರರ ಬಗ್ಗೆ ಹೇಳುವುದಾದರೆ ಯುರೋಪಿನಲ್ಲಿ ಒಂದು ದೊಡ್ಡ ಯುದ್ಧ ನಡೆಯಲಿದೆ. ಅದು ತುಂಬಾ ಭಯಾನಕವಾಗಿರುತ್ತದೆ. ಅದರಲ್ಲಿ ಅನೇಕ ಜನರು ಪ್ರಾಣ ಕಳೆದುಕೊಳ್ಳುವ ಸಂಭವ ಅಧಿಕವಾಗಲಿದೆ ಎಂದಿದ್ದಾರೆ.

2025ರ ವೇಳೆಗೆ ಯುರೋಪಿನಲ್ಲಿ ಸಂಘರ್ಘಕ್ಕೆ ಕಾರಣವಾಗಲಿದೆ. ಅದು ಖಂಡದ ಜನಸಂಖ್ಯೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗುತ್ತದೆ. ಈ ಸಂಘರ್ಷವು ಕೇವಲ ಮಿಲಿಟರಿ ಮಾತ್ರವಲ್ಲ, ಸಾಂಸ್ಕೃತಿಕ ಮತ್ತು ಆರ್ಥಿಕವೂ ಆಗಿರಬಹುದು ಎಂದು ಅವರು ಸೂಚಿಸಿದ್ದರು. ಇದೀಗ ಅದರಂತೆ ರಷ್ಯಾ ಮತ್ತು ಉಕ್ರೇನ್ ನಡುವೆ ಬಹಳ ದಿನಗಳಿಂದ ಯುದ್ಧ ನಡೆಯುತ್ತಿದ್ದು, ಯಾವುದೇ ಪರಿಹಾರ ಕಾಣುತ್ತಿಲ್ಲ.

ಯುರೋಪಿನಲ್ಲಿ ಆಳವಾಗುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳ ಮಧ್ಯೆ, ಬಾಬಾ ವಂಗಾ ಅವರ ಭವಿಷ್ಯವಾಣಿಯನ್ನು ಪರಿಗಣಿಸಿ, ಅದರಲ್ಲಿ ಅವರು ಹಳೆಯ ಖಂಡವು ಕಳೆದುಹೋದರೆ, ಮೊದಲು ಮನಸ್ಸಿಗೆ ಬರುವ ಹೆಸರು ಯುರೋಪ್ ಎಂದು ಹೇಳಿದ್ದರು ಇದೀಗ ಅಲ್ಲಿನ ಯುದ್ಧಕ್ಕೆ ಸಾಕ್ಷಿಯಾಗುವಂತೆ ಭವಿಷ್ಯ ನಿಜವಾಗುತ್ತಿದೆ.

ಬಾಬಾ ವಂಗಾ ಅವರಂತೆಯೇ ನಾಸ್ಟ್ರಾಡಾಮಸ್ ಕೂಡ ಯುರೋಪಿನ ಬಗ್ಗೆ ಇದೇ ರೀತಿಯ ಭವಿಷ್ಯ ನುಡಿದಿದ್ದಾರೆ. ಅವರು ಯುರೋಪಿನಲ್ಲಿ ಕ್ರೂರ ಯುದ್ಧಗಳು ಮತ್ತು ಪ್ರಾಚೀನ ಪ್ಲೇಗ್ ಕಾಯಿಲೆಯ ಹರಡುವಿಕೆಯನ್ನು ಭವಿಷ್ಯ ನುಡಿದರು. ಇದು ಅಪಾರ ದುಃಖವನ್ನು ಉಂಟುಮಾಡುತ್ತದೆ. ಈ ರೋಗವು ಜನಸಂಖ್ಯೆಗೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ನಾಸ್ಟ್ರಾಡಾಮಸ್ ಒಬ್ಬ ಫ್ರೆಂಚ್ ಜ್ಯೋತಿಷಿ ಮತ್ತು ವೈದ್ಯರಾಗಿದ್ದು, 1503 ರಲ್ಲಿ ಜನಿಸಿದ ಅವರು 1566 ರಲ್ಲಿ ನಿಧನರಾದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net