

Stylish Star : ಬಾಲಿವುಡ್ನ ಖ್ಯಾತ ನಟ ಶಾರುಕ್ ಖಾನ್ನ ಅವರ ಹಿಟ್ ಚಿತ್ರವಾದ ಜವಾನ್ ಸಿನಿಮಾ ನಿರ್ದೇಶನ ಮಾಡಿದ್ದ ತಮಿಳಿನ ಡೈರೆಕ್ಟರ್ ಅಟ್ಲೀ, ಇದೀಗ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅದೂ ತೆಲುಗಿನ ಪುಷ್ಪ ಹೀರೋ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜತೆ ಎಂದು ಸುದ್ದಿ ಸಿನಿಮಾ ವಲಯದಲ್ಲಿ ಹರಿದಾಡುತ್ತಿದೆ.
ಹೌದು, ಅಟ್ಲೀ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ನಲ್ಲಿ ಹೊಸ ಚಿತ್ರವೊಂದು ಮೂಡಿ ಬರುತ್ತಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಲಿದ್ದಾರೆ. ಚಿತ್ರ ದೊಡ್ಡ ಬಜೆಟ್ನಲ್ಲಿ ಮೂಡಿಬರಲಿದ್ದು, ಅಲ್ಲು ಅರ್ಜುನ್ ಅವರ ಇದುವರೆಗಿನ ಅತ್ಯಧಿಕ ಸಂಭಾವನೆ ಪಡೆಯಲಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.
ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಅಲ್ಲು ಅರ್ಜುನ್ ಈ ಚಿತ್ರಕ್ಕಾಗಿ 175 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ. ಇದಲ್ಲದೆ, ಅವರು ಲಾಭದಲ್ಲಿ 15 ಪ್ರತಿಶತ ಪಾಲನ್ನು ತೆಗೆದುಕೊಳ್ಳಲಿದ್ದಾರೆ. "ಅಲ್ಲು ಅರ್ಜುನ್ ನಿರ್ಮಾಪಕ ಸನ್ ಪಿಕ್ಚರ್ಸ್ ಜತೆ 175 ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಲಾಭದಲ್ಲಿ 15 ಪ್ರತಿಶತ ಪಾಲನ್ನು ಹೊಂದಿರುವ ಬ್ಯಾಕೆಂಡ್ ಒಪ್ಪಂದವನ್ನು ಮಾಡಿಕೊಂಡಿದ್ದಾರೆ''.
ಆಧುನಿಕ ಯುಗದಲ್ಲಿ ನಟರೊಬ್ಬರು ಸಹಿ ಮಾಡಿದ ಅತಿದೊಡ್ಡ ಫ್ರಂಟ್-ಎಂಡ್ ಒಪ್ಪಂದ ಇದು. ಮತ್ತು ಅಲ್ಲು ಆಗಸ್ಟ್ 2025 ರಿಂದ ಅಟ್ಲೀ ಮತ್ತು ಸನ್ ಪಿಕ್ಚರ್ಸ್‌ಗಳಿಗೆ ಬೃಹತ್ ದಿನಾಂಕಗಳನ್ನು ನಿಗದಿಪಡಿಸಿದ್ದಾರೆ. ಅಗಸ್ಟ್ ಅಥವಾ ಅಕ್ಟೋಬರ್ನಲ್ಲಿ ಸಿನಿಮಾ ಸೆಟ್ಟೆರಲಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖ.(ಏಜೆನ್ಸೀಸ್)