Pushpa-2 ಚಿತ್ರದ Peelings ಸಾಂಗ್ ರಿಲೀಸ್​; ಹಿಂದೆಂದೂ ನೋಡದ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡ ರಶ್ಮಿಕಾ

Pushpa 2
Published on

ಹೈದರಾಬಾದ್​: ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ನಟನೆಯ ಪುಷ್ಟ-2 (Pushpa-2) ರಿಲೀಸ್​ಗೆ ದಿನಗಣನೆ ಆರಂಭವಾಗಿದ್ದು, ಸಿನಿರಸಿಕರು ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಟ್ರೇಲರ್​, ಹಾಡು, ಭರ್ಜರಿ ಪ್ರಮೋಷನ್​ ಮೂಲಕ ಭರ್ಜರಿ ಸೌಂಡ್​ ಮಾಡುತ್ತಿರುವ ಚಿತ್ರತಂಡವು ಇದೀಗ ಪೀಲಿಂಗ್ಸ್​ ಹಾಡನ್ನು ಬಿಡುಗಡೆ ಮಾಡಿದ್ದು, ಚಿತ್ರತಂಡ ಮತ್ತಷ್ಟು ಹೈಪ್​ ಕ್ರಿಯೇಟ್​ ಮಾಡುವಲ್ಲಿ ಯಶಸ್ವಿಯಾಗಿದೆ.

ಅಲ್ಲುಅರ್ಜುನ್​-ರಶ್ಮಿಕಾ (Allu Arjun-Rashmika Mandanna) ಜೊತೆಯಾಗಿ ನಟಿಸಿರುವ ಪೀಲಿಂಗ್ಸ್​ (Peelings) ಹಾಡು ಈ ಹಿಂದೆ ಟೀಸರ್​ ಮೂಲಕ ಸಾಕಷ್ಟು ಸೌಂಡ್​ ಮಾಡಿತ್ತು. ಇದೀಗ ಚಿತ್ರತಂಡ ಹಾಡನ್ನು ಬಿಡುಗಡೆ ಮಾಡಿದ್ದು, ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಮಸ್ತ್​ ಸ್ಟೆಪ್ಸ್​ ಹಾಕುವ ಮೂಲಕ ಹಾಡಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಪೀಲಿಂಗ್ಸ್​ (Peelings) ಹಾಡಿನಲ್ಲಿ ಮೈ ಚಳಿಬಿಟ್ಟು ಕುಣಿದಿರುವ ರಶ್ಮಿಕಾ ಮಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಈ ಹಾಡು ಚಿತ್ರದ ಬಗೆಗಿನ ಹೈಪ್​ ಕ್ರಿಯೇಟ್​ ಮಾಡುವಲ್ಲಿ ಯಶಸ್ವಿಯಾಗಿದ್ದು, ಅಭಿಮಾನಿಗಳು ಡಿಸೆಂಬರ್​ 05ಕ್ಕಾಗಿ ಎದುರು ನೋಡುತ್ತಿದ್ದಾರೆ.

ಡಿಸೆಂಬರ್​ 05ರಂದು ಪುಷ್ಪ-2 ದಿ ರೂಲ್​ (Pushpa-2 The Rule) ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರತಂಡ ಈಗಾಗಲೇ ದೇಶದ ವಿವಿಧ ನಗರಗಳಲ್ಲಿ ಭರ್ಜರಿ ಪ್ರಮೋಷನ್​ ಮಾಡುತ್ತಿದೆ. ಪಾಟ್ನಾ, ಚೆನ್ನೈ, ಕೋಲ್ಕತ್ತಾ, ಕೊಚ್ಚಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ಮಹಾನಗರಗಳಿಗೆ ಭೇಟಿ ಕೊಡುವ ಮೂಲಕ ಪುಷ್ಪ ತಂಡ ಪ್ರಚಾರ ನಡೆಸಿದ್ದು, ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

ರಶ್ಮಿಕಾ (Rashmika Mandanna) ಈ ಬಾರಿ ಇಡೀ ದೇಶವನ್ನು ಸೆಳೆಯುತ್ತಾರೆ. ಅಭಿಮಾನಿಗಳು ಮತ್ತೊಮ್ಮೆ ಅವರತ್ತ ಆಕರ್ಷಿತರಾಗುತ್ತಾರೆ. ನನ್ನೊಂದಿಗೆ ಪ್ರಸ್ತುತ ಕೆಲಸ ಮಾಡುತ್ತಿರುವ ಏಕೈಕ ಹೀರೋಯಿನ್​​ ನೀವು. ನಿಮ್ಮ ಬೆಂಬಲವಿಲ್ಲದೇ ನಾನು ನಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ನಟ ಅಲ್ಲು ಅರ್ಜುನ್​ ರಶ್ಮಿಕಾ ಮಂದಣ್ಣರನ್ನು ಪ್ರಮೋಷನ್​ ವೇಳೆ ಹಾಡಿ ಹೊಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net