ತಮ್ಮ ಮಗುವಿನ ಮುದ್ದಾದ ಹೆಸರನ್ನು ರಿವೀಲ್​ ಮಾಡಿದ Rohit Sharma-Ritika; ಆದರೆ ಶುರುವಾಗುವುದು ಮಾತ್ರ...

Rohit Ritika
Published on

ಮುಂಬೈ: ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಅವರ ಪತ್ನಿ ರಿತಿಕಾ ನವೆಂಬರ್​ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರ ಹೊರಬರುತ್ತಿದ್ದಂತೆಯೇ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಇದೀಗ ರೋಹಿತ್​-ರಿತಿಕಾ ದಂಪತಿ ತಮ್ಮ ಮಗುವಿನ ಹೆಸರನ್ನು ರಿವೀಲ್​ ಮಾಡಿದ್ದಾರೆ.

ದಂಪತಿಗಳು ತಮ್ಮ ಮಗುವಿಗೆ ಅಹಾನ್​ (Ahaan) ಎಂದು ಹೆಸರಿಟ್ಟಿದ್ದು, ಈ ವಿಚಾರವನ್ನು ರಿತಿಕಾ (Ritika)ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಟೋರಿ ಪೋಸ್ಟ್​ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

Capture

ಕ್ರಿಸ್​ಮಸ್​ ಥೀಮ್ ಇರುವ ಫೋಟೋ ಒಂದನ್ನು ಹಂಚಿಕೊಂಡಿರುವ ರಿತಿಕಾ ತಮ್ಮ ಕುಟುಂಬದ ನಾಲ್ಕು ಜನರ ಹೆಸರನ್ನು ಉಲ್ಲೇಖಿಸಿದ್ದಾರೆ. ಅದರಂತೆ ರೋಹಿತ್ ಶರ್ಮಾ ಅವರ ಹೆಸರನ್ನು ರೋ, ರಿತಿಕಾ ಅವರ ಹೆಸರನ್ನು ರಿಟ್ಸ್ ಎಂದು ಹಾಗೂ ಮಗಳು ಸಮೈರಾ ಅವರ ಹೆಸರನ್ನು ಸ್ಯಾಮಿ ಎಂತಲೂ, ಕೊನೆಗೆ ತಮ್ಮ ಮಗನ ಹೆಸರನ್ನು ಅಹಾನ್ ಎಂದು ಸ್ಪಷ್ಟವಾಗಿ ಬರೆಯುವ ಮೂಲಕ ರಿವೀಲ್​ ಮಾಡಿದ್ದಾರೆ.

ನವೆಂಬರ್​ 15ರಂದು ರಿತಿಕಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ರೋಹಿತ್​-ರಿತಿಕಾ (Rohit Sharma-Ritika) ದಂಪತಿಗಳು ಅಧಿಕೃತವಾಗಿ ರಿವೀಲ್​ ಮಾಡದೆ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ರೋಹಿತ್ ಮತ್ತು ರಿತಿಕಾ 2015ರಲ್ಲಿ ಮದುವೆಯಾದರು. 2018, ಡಿಸೆಂಬರ್​ನಲ್ಲಿ ಸಮೀರ ಎಂಬ ಹೆಣ್ಣು ಮಗು ಜನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net