More

    ಅಲ್ಲು ಅರ್ಜುನ್ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ! ಇದೊಂದು ವಿಷಯದಿಂದ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ‘ಪುಷ್ಪ-2’

    ಆಂಧ್ರಪ್ರದೇಶ: ಸುಕುಮಾರ್ ನಿರ್ದೇಶನದ, ಟಾಲಿವುಡ್​ ಐಕಾನ್ ಸ್ಟಾರ್​, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪುಷ್ಪ 2 ಚಿತ್ರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಪುಷ್ಪ 2 ಚಿತ್ರದ ಅಬ್ಬರ ಬಲು ಜೋರಾಗಿದೆ. ಇದೀಗ ರಿಲೀಸ್​ಗೂ ಮುನ್ನವೇ ಸಿನಿಮಾದ ಡಿಜಿಟಲ್​ ಹಕ್ಕುಗಳು ಮಾರಾಟವಾಗಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

    ಇದನ್ನೂ ಓದಿ: ಶತಮಾನದಷ್ಟು ಹಳೆಯದಾದ ರೈಲು ಗಾಡಿ ಪತ್ತೆ! ನಿಗೂಢ ಸಮಾಧಿ ಹಿಂದಿದೆಯಾ ಕೈವಾಡ? ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಿಷ್ಟು

    ಅಲ್ಲು ಅರ್ಜುನ್​ ಚಿತ್ರದ ಟಿಕೆಟ್ ಬೆಲೆಯು ದುಬಾರಿಯಾಗಲಿದ್ದು, ಮುಂಗಡ ಬುಕಿಂಗ್​ನಲ್ಲಿಯೇ ಸಿನಿಮಾ ದಾಖಲೆಯತ್ತ ಸಾಗಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಇನ್ನು ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್‌ ಹಕ್ಕುಗಳ ಮಾರಾಟದೊಂದಿಗೆ ಪುಷ್ಪ 2 ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಇದು ಐಕಾನ್ ಸ್ಟಾರ್​ ಅಭಿಮಾನಿಗಳಿಗೆ ಸಿನಿಮಾ ಗೆದ್ದಷ್ಟೇ ಖುಷಿ ತಂದಿದೆ. ಅಸಲಿಗೆ ಯಾವ ಒಟಿಟಿ ಪ್ಲಾಟ್​ಫಾರ್ಮ್​ ಪಾಲಾಯ್ತು ಸಿನಿಮಾ? ಎಷ್ಟು ಮೊತ್ತಕ್ಕೆ ಖರೀದಿಸಲಾಯಿತು ಎಂಬುದರ ವಿವರ ಹೀಗಿದೆ.

    ಮೂಲಗಳ ಪ್ರಕಾರ, ಪುಷ್ಪ 2: ದಿ ರೂಲ್‌ ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಖರೀದಿಸಿದ್ದು, ಬರೋಬ್ಬರಿ 250 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಇದು ಇಲ್ಲಿಗೆ ನಿಂತಿಲ್ಲ ಎಂದು ಹೇಳಲಾಗಿದ್ದು, 300 ಕೋಟಿ ರೂ.ವರೆಗೆ ಹೋಗಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯದ ಮಟ್ಟಿಗೆ ಬಿಡುಗಡೆಗೂ ಮುನ್ನ ನಿಗದಿಪಡಿಸಿರುವ ಮೊತ್ತ 250 ಕೋಟಿ ರೂ. ಆಗಿದ್ದು, ಮುಂಬರುವ ದಿನಗಳನ್ನು ನೋಡಿಕೊಂಡು 300 ಕೋಟಿ ರೂ.ಗೆ ಮಾತಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಉತ್ತಮ ಪ್ರದರ್ಶನದ ನಡುವೆಯೆ ಸಿಎಸ್​ಕೆಗೆ ಶಾಕ್; ಐಪಿಎಲ್​ನಿಂದ ಸ್ಟಾರ್​ ಬ್ಯಾಟ್ಸ್​ಮನ್​

    ‘ಬಾಹುಬಲಿ 2’ ಮತ್ತು ‘ಕೆಜಿಎಫ್ 2’ ಚಿತ್ರಗಳ ನಂತರ ‘ಪುಷ್ಪ 2’ಗೆ ಭಾರೀ ಬೇಡಿಕೆ ಹೆಚ್ಚಿದ್ದು, ನಿರೀಕ್ಷಿತ ಪ್ಯಾನ್ ಇಂಡಿಯಾ ಚಲನಚಿತ್ರಗಳಲ್ಲಿ ಅಲ್ಲು ಅರ್ಜುನ್ ಸಿನಿಮಾ ಸದ್ಯ ಮುಂಚೂಣಿಯಲ್ಲಿದೆ. ಈ ಹಿಂದೆ ಡಿಜಿಟಲ್ ಹಕ್ಕುಗಳ ಮಾರಾಟದಲ್ಲಿ ದಾಖಲೆ ನಿರ್ಮಿಸಿದ್ದ ಎಸ್ಎಸ್ ರಾಜಮೌಳಿ ನಿರ್ದೇಶನದ ‘RRR’ ಚಿತ್ರವು 170 ಕೋಟಿ ರೂ.ಗೆ ಖರೀದಿಯಾಗಿತ್ತು. ಈಗ ಈ ದಾಖಲೆಯನ್ನು ಪುಷ್ಪ2 ಬ್ರೇಕ್ ಮಾಡಿದೆ,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts