More

    ಶತಮಾನದಷ್ಟು ಹಳೆಯದಾದ ರೈಲು ಗಾಡಿ ಪತ್ತೆ! ನಿಗೂಢ ಸಮಾಧಿ ಹಿಂದಿದೆಯಾ ಕೈವಾಡ? ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಿಷ್ಟು

    ಬೆಲ್ಜಿಯಂನಲ್ಲಿ ಪುರಾತತ್ವ ಶಾಸ್ತ್ರಜ್ಞರು ಒಂದು ಶತಮಾನದಷ್ಟು ಹಿಂದಿನ ರೈಲು ಗಾಡಿಯನ್ನು ಇತ್ತೀಚೆಗೆ ಪತ್ತೆಹಚ್ಚಿದ್ದು, ಆಂಟ್‌ವರ್ಪ್‌ನ ಮಹಾನಗರದಲ್ಲಿರುವ ಪುರಾತನ ಕೋಟೆಯ ಉತ್ಖನನದ ಸಮಯದಲ್ಲಿ, ಅಪರೂಪದ 100 ವರ್ಷಗಳಷ್ಟು ಹಳೆಯದಾದ ರೈಲು ತುಣುಕನ್ನು ಹೊರತೆಗೆದಿದ್ದಾರೆ. ಇದರ ಮೇಲೆ ಕೆಲವು ಸ್ಪಷ್ಟವಾದ ಅಕ್ಷರಗಳು ಮತ್ತು ಬಣ್ಣಗಳು ಕಂಡುಬಂದಿರುವುದು ನೋಡುಗರ ಹುಬ್ಬೇರುವಂತೆ ಮಾಡಿದೆ.

    ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಈಗಲೂ ಸೆರೆಲಾಕ್ ಕೊಡ್ತಿದ್ದೀರಾ? ಹಾಗಿದ್ರೆ ತಪ್ಪದೇ ಈ ವರದಿ ಓದಿ

    ಲಂಡನ್ ನಾರ್ತ್ ಈಸ್ಟರ್ನ್ ರೈಲ್ವೇ ಒಂದು ಸಣ್ಣ ಸಂದೇಶವನ್ನು ಜನರಿಗೆ ರವಾನಿಸಿದ್ದು, ಹಿಂದಿನ LNER ಶೇಖರಣಾ ವ್ಯಾಗನ್ ರೈಲು ನಿರ್ವಾಹಕರ ಯುಕೆ ಪ್ರಧಾನ ಕಛೇರಿಯಿಂದ 500 ಮೈಲಿಗಳಷ್ಟು ದೂರದಲ್ಲಿ ಅನಿರೀಕ್ಷಿತವಾಗಿ ಪತ್ತೆಯಾಗಿದೆ. ಇದು ರೈಲ್ವೆಯ ಆರಂಭಿಕ ಮಾದರಿಗಳಲ್ಲಿ ಒಂದಾಗಿದೆ ಎಂದು ಗುರುತಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.

    ಆಂತರಿಕ LNER ಸಂಶೋಧನೆಯನ್ನು ಉಲ್ಲೇಖಿಸಿ, ಅಧಿಕೃತ ಮೂಲವು ಈ ‘ಟ್ರಕ್’ LNER ರಿಮೂವಲ್​ನ ಮೊದಲ ಮಾದರಿಯಾಗಿದೆ ಎಂದು ಸೂಚಿಸಿದೆ. ಇದು 1930ರ ಸುಮಾರಿಗೆ ಸಂಕ್ಷಿಪ್ತವಾಗಿ ಸೇವೆಯಲ್ಲಿತ್ತು. ರೈಲು ಕಂಪನಿಯು 1923ರಲ್ಲಿ ತನ್ನ ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು ಎಂದು ವರದಿಯಾಗಿದೆ.

    ಇದನ್ನೂ ಓದಿ: ಯುಪಿಎಸ್​ಸಿ ಟಾಪರ್​ಗೆ ಕೊಹ್ಲಿಯೇ ಸ್ಫೂರ್ತಿ! ವಿರಾಟ್ ಅವರ ಯಾವ ಗುಣ ಅನನ್ಯಾಗೆ ಇಷ್ಟವಾಯಿತು?

    ಗಮನಾರ್ಹವಾಗಿ, ಇದನ್ನು ಮರದಿಂದ ಮಾಡಲಾಗಿತ್ತು ಮತ್ತು ಹಳದಿ ಅಕ್ಷರಗಳೊಂದಿಗೆ ಗಾಢ ಕೆಂಪು ಬಣ್ಣದಿಂದ ಚಿತ್ರಿಸಲಾಗಿದೆ ಮತ್ತು ಸರಕುಗಳ ಸ್ಥಳೀಯ ಸಾಗಣೆಗೆ ಬಳಸಲಾಯಿತು. LNERನ ಹೇಳಿಕೆಯು ರೈಲು ವ್ಯಾಗನ್ ವಿಶಿಷ್ಟವಾಗಿದೆ ಮತ್ತು ಪ್ರದೇಶದ ಸುಸ್ಥಿರ ಚಲನಶೀಲತೆಗೆ ಸಂಬಂಧಿಸಿದ ಯೋಜನೆಯ ಒಂದು ಭಾಗವಾಗಿದೆ ಎಂದು ಉಲ್ಲೇಖಿಸಿದೆ.

    ಸಂಶೋಧನೆಯ ಬಗ್ಗೆ ಪ್ರತಿಕ್ರಿಯಿಸಿದ ಪುರಾತತ್ತ್ವ ಶಾಸ್ತ್ರಜ್ಞ ಫೆಮ್ಕೆ ಮೆಟರ್ನ್ಸ್, “ಮರದ ರಿಮೂವಲ್ ಟ್ರಕ್ ಸುಮಾರು ನೂರು ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ. ಗಾಡಿ ಹೇಗೆ ಸಮಾಧಿ ಆಯಿತು ಎಂಬುದೇ ನಿಗೂಢ. ಈ ಅಪರೂಪದ ಗಾಡಿಯನ್ನು ಎಷ್ಟು ವರ್ಷಗಳ ಹಿಂದೆ ಹೂಳಲಾಯಿತು ಎಂಬುದು ಸದ್ಯ ಯಾರಿಗೂ ತಿಳಿದಿಲ್ಲ ಅಥವಾ ನೆನಪಿಲ್ಲ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

    VIDEO: ನನ್ನ ಶಕ್ತಿಯ ಮೂಲ S*X! ಬಿರುಸಿನ ಪ್ರಚಾರದ ವೇಳೆ ಮಹುವಾ ಮೊಯಿತ್ರಾ ಓಪನ್​ ಟಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts