

ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ದ್ವೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದ್ದು, ಕಾಂಗ್ರೆಸ್ನ ಮೊದಲ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಸೋಮವಾರ ನಾಮಪತ್ರ ಸಲ್ಲಿಸುವುದರೊಂದಿಗೆ ಚಟುವಟಿಕೆಗಳು ಬಿರುಸಾಗಲಿವೆ.
ಆಡಳಿತಾರೂಢ ಬಿಜೆಪಿ ‘3+2’ ಸೂತ್ರದಂತೆ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡಿದ್ದು, ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸೋಮವಾರ ಅಂತಿಮಗೊಳಿಸಲಿದೆ. ತಲಾ 45 ಮತಗಳ ಲೆಕ್ಕ ಹಾಕಿದರೆ ಬಿಜೆಪಿ 2 ಅಭ್ಯರ್ಥಿಗಳನ್ನು ಗೆಲ್ಲಿಸಿದ ಬಳಿಕ 30 ಮತಗಳನ್ನು ಉಳಿಸಿಕೊಳ್ಳಲಿದ್ದರೆ, ಖರ್ಗೆ ನಿರಾಯಾಸ ಗೆಲುವಿನ ಜತೆಗೆ ಕಾಂಗ್ರೆಸ್ ಬಳಿಯೂ ಹೆಚ್ಚುವರಿಯಾಗಿ 23 ಮತಗಳು ಉಳಿಯಲಿವೆ. ಹೀಗಿದ್ದರೂ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎರಡೂ ಪಕ್ಷಗಳು ಒಲವು ತೋರಿಸದಿರುವುದು ಕುತೂಹಲ ಕೆರಳಿಸಿದೆ.
ಕಳೆದ ವರ್ಷ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಸತ್ತಿನ ‘ಹಿರಿಯರ ಮನೆ’ಗೆ ಅನಾಯಾಸವಾಗಿ ಪ್ರವೇಶ ಪಡೆಯುವ ಲಕ್ಷಣಗಳು ಗೋಚರಿಸುತ್ತಿದ್ದು, ರಾಜ್ಯದ ಬದಲಾದ ರಾಜಕೀಯ ವಿದ್ಯಮಾನಕ್ಕೆ ರಾಜ್ಯಸಭಾ ಚುನಾವಣೆ ಅಖಾಡ ಸಾಕ್ಷಿಯಾಗಲಿದೆ. ಇದನ್ನೂ ಓದಿ: ಹಾಸಿಗೆಗಳಿಲ್ಲ ಎನ್ನುತ್ತವೆ ಆಸ್ಪತ್ರೆಗಳು, ರಾಜಕೀಯ ಮಾಡಿದರೆ ಹುಷಾರ್ ಎನ್ನುತ್ತಾರೆ ಸಿಎಂ. ಮುಂದೇನು?
ವಿಧಾನಸಭೆ ಬಲಾಬಲದ ಲೆಕ್ಕಾಚಾರದ ಪ್ರಕಾರ ಕಡಿಮೆ ಸಂಖ್ಯೆ ಸದಸ್ಯರುಳ್ಳ ಜೆಡಿಎಸ್ ಎಚ್.ಡಿ. ದೇವೇಗೌಡರನ್ನು ಅಭ್ಯರ್ಥಿ ಎಂದು ಒಮ್ಮತದಿಂದ ತೀರ್ವನಿಸಿ, ಪಕ್ಷದ ಹಿರಿಯರರೆನ್ನುವ ಒತ್ತಾಸೆ ಕಟ್ಟಿಹಾಕಿ, ಎದುರಾಳಿಗಳಿಗೆ ಪರೋಕ್ಷ ಒತ್ತಡ ತಂತ್ರ ಪ್ರಯೋಗಿಸಿದೆ.
ನೇರ ಚುನಾವಣೆಯಲ್ಲಿ ಜನಾದೇಶವೆಂದು ಹೇಳಿಕೊಳ್ಳ ಬಹುದು. ಆದರೆ ರಾಜ್ಯಸಭೆ ಚುನಾವಣೆಯಲ್ಲಿ ಅದೇ ಮಾತನ್ನು ಹೇಳಲಾಗದು. ಹಿರಿಯ ರಾಜಕಾರಣಿಯನ್ನು ಸೋಲಿಸಿದ ಅಪವಾದ ಹೊರಲು ಬಿಜೆಪಿ, ಕಾಂಗ್ರೆಸ್ ಪಕ್ಷಗಳೆರಡೂ ತಯಾರಿಲ್ಲ. ಹೀಗಾಗಿ ಮೂರನೇ ಅಭ್ಯರ್ಥಿ ಬಗ್ಗೆ ಯೋಚಿಸದೆ ತಟಸ್ಥ ನಿಲುವು ತಳೆಯಲು ಗಂಭೀರ ಚಿಂತನೆ ನಡೆಸಿದ್ದು, ಸೋಮವಾರ ನಿಚ್ಚಳವಾಗಲಿದೆ. ಹಿರಿಯ ರಾಜಕೀಯ ನಾಯಕರಿಗೆ ಗೌರವ ನೀಡಲೆಂದು ಪರೋಕ್ಷವಾಗಿ ಬೆಂಬಲಿಸುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಬಲ, ಪ್ರಭಾವಿ ಒಕ್ಕಲಿಗ ನಾಯಕರು ಇದ್ದರೂ ದೊಡ್ಡಗೌಡರ ವರ್ಚಸ್ಸು, ಹಿಡಿತ ಇನ್ನೂ ದಕ್ಕಿಸಿಕೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಎಚ್ಡಿಡಿಗೆ ಪರೋಕ್ಷವಾಗಿ ಬೆಂಬಲಿಸುವ ಮೂಲಕ ಬಲಿಷ್ಠ ಒಕ್ಕಲಿಗ ಸಮುದಾಯದ ‘ಓಲೈಕೆ ತಂತ್ರ’ ಅನುಸರಿಸುತ್ತಿವೆ. ಇದನ್ನೂ ಓದಿ: ಮೂರು ಪದರದ ಮಾಸ್ಕ್ ಧರಿಸಲು ಸೂಚನೆ: ನಿಲುವು ಬದಲಾಯಿಸಿದ ಡಬ್ಲ್ಯುಎಚ್ಒ
ವಿರೋಧದ ಅಳುಕು: ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿಸಿದ್ದರಿಂದಲೇ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಆಡಳಿತದ ಚುಕ್ಕಾಣಿ ಹಿಡಿದು 1 ವರ್ಷ ಕಳೆಯುವ ಮುನ್ನವೇ ಜೆಡಿಎಸ್ ಬೆಂಬಲ ಪಡೆದರೆ ಅಥವಾ ಬೆಂಬಲಿಸಿದರೆ ಪಕ್ಷದ ಒಳ-ಹೊರಗೆ ತೀವ್ರ ವಿರೋಧ ಕಟ್ಟಿಕೊಳ್ಳುವ ಅಳುಕು ಬಿಜೆಪಿಗಿದೆ. ಅದೇ ರೀತಿ ಎರಡನೇ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಕೈಸುಟ್ಟುಕೊಂಡಿದೆ. ಮೈಸೂರು ಭಾಗದಲ್ಲಿ ಪಕ್ಷದ ಮೇಲಿನ ಹಿಡಿತ ತಪ್ಪಿ ಹೋಗಲಿದೆ ಎಂಬ ಆತಂಕವೂ ಪಕ್ಷಕ್ಕಿದೆ. ದೇವೇಗೌಡರಿಗೆ ವಿರೋಧ ಹಾಗೂ ಬೆಂಬಲ ಯಾವುದೇ ನಿರ್ಧಾರ ಕೈಗೊಂಡರೂ ನಷ್ಟ ಕಟ್ಟಿಟ್ಟ ಬುತ್ತಿ ಎಂಬುದು ತಟಸ್ಥ ನಿಲುವಿನ ಯೋಚನೆಗೆ ಮೂಲ ಕಾರಣ.
ಮೈತ್ರಿ ವಿಷಯದಲ್ಲಿ ಮೂರೂ ಪಕ್ಷಗಳದ್ದು ಪರಸ್ಪರ ಕಹಿ ಅನುಭವ. ಹೀಗಾಗಿ ಜೆಡಿಎಸ್ ಜತೆೆ ಕಾಂಗ್ರೆಸ್, ಬಿಜೆಪಿ ಅಂತರ ಕಾಯ್ದುಕೊಳ್ಳಲು ಬಯಸಿವೆ. ಅಪನಂಬಿಕೆ-ಅಪಮಾನದ ಕಾರಣಕ್ಕೆ ಬಿಜೆಪಿ ಜತೆಗೆ ಹೋಗಲು ಇಷ್ಟವಿಲ್ಲ. ಕಾಂಗ್ರೆಸ್ ಬೆಂಬಲ ಕೋರಿದರೆ ವಿಧಾನಪರಿಷತ್ನಲ್ಲಿ 1 ಸೀಟ್ ಬಿಟ್ಟು ಕೊಡಬೇಕಾಗುತ್ತದೆ ಎಂದು ಸ್ವಾಭಿಮಾನದ ಹೆಸರಿನಲ್ಲಿ ಜೆಡಿಎಸ್ ಕಾದುನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಇದನ್ನೂ ಓದಿ:
ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರಿಗೆ ಸೋಲಿನ ರುಚಿ ತೋರಿಸಿದ್ದ ಬಿಜೆಪಿ ರಾಜ್ಯಸಭಾ ಚುನಾವಣೆಯಲ್ಲೂ ರಿಸ್ಕ್ ತೆಗೆದುಕೊಳ್ಳುತ್ತಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿದೆ. ಜೆಡಿಎಸ್ಗೆ ಅಭ್ಯರ್ಥಿಗೆ 34 ಮತಗಳಷ್ಟೇ ಇದೆ. ಇಬ್ಬರು ಪಕ್ಷೇತರ ಹಾಗೂ ಒಂದು ಬಿಸ್ಪಿ ಮತ ಸೇರಿದರೆ ತನ್ನ ಸಂಖ್ಯೆ 30ಕ್ಕೆ ಏರಿಸಿಕೊಳ್ಳಬಹುದು. ಒಂದು ವೇಳೆ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿ ಜೆಡಿಎಸ್ ಮತ ಗಳಿಕೆ 30ಕ್ಕಿಂತ ಕಡಿಮೆ ಮಾಡಿದಲ್ಲಿ ಅಥವಾ 4 ಮತವನ್ನು ತಾನು ವರ್ಗಾಯಿಸಿಕೊಂಡರೆ ಬಿಜೆಪಿಗೆ ಅನುಕೂಲ. ಜೆಡಿಎಸ್ನಿಂದ ದೇವೇಗೌಡರ ಹೊರತು ಬೇರೆಯವರನ್ನು ಕಣಕ್ಕಿಳಿಸಿದರೆ ಬಿಜೆಪಿ ಈ ತಂತ್ರ ಪ್ರಯೋಗ ಮಾಡಿ ಒಂದು ಸ್ಥಾನ ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರವಿದೆ. ಇದನ್ನೂ ಓದಿ: VIDEO: ದೊಡ್ಡ ಗಂಡಾಂತರದಿಂದ ಪಾರಾದ ಸಚಿವ ನಾರಾಯಣಗೌಡರು…
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕರಾದ ಉಮೇಶ ಕತ್ತಿ ಹಾಗೂ ಮುರುಗೇಶ್ ನಿರಾಣಿ ಭಾನುವಾರ ದಿಢೀರ್ ಭೇಟಿಯಾದದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿ, ಕುತೂಹಲದ ಚರ್ಚೆಗೆ ಗ್ರಾಸವಾಯಿತು. ಉಮೇಶ ಕತ್ತಿ ನೇತೃತ್ವದಲ್ಲಿ ‘ಪ್ರತ್ಯೇಕ ಊಟದ ಸಭೆ’ ಬಳಿಕ ಸಿಎಂಗೆ ಇದೇ ಮೊದಲ ಬಾರಿ ಇವರ ಭೇಟಿಯಾಗಿದ್ದರೆ, ಮಂತ್ರಿ ಪದವಿ ವಂಚಿತ ನಿರಾಣಿ ಜತೆಗೆ ಧಾವಿಸಿದ್ದೂ ರಾಜಕೀಯ ಕ್ಷೇತ್ರದಲ್ಲಿ ಕಾತರ ಹೆಚ್ಚಿಸುವಂತೆ ಮಾಡಿತು.
ಆದರೆ ರಾಜ್ಯಸಭೆ ಉಮೇದುವಾರಿಕೆಗೆ ರಮೇಶ್ ಕತ್ತಿ ಹೆಸರು ಶಿಫಾರಸು, ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ಗ್ರೂಪ್ಗೆ ಲಭಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸಲೆಂದು ಇವರಿಬ್ಬರೂ ಭೇಟಿಯಾಗಿದ್ದರು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.