VIDEO: ದೊಡ್ಡ ಗಂಡಾಂತರದಿಂದ ಪಾರಾದ ಸಚಿವ ನಾರಾಯಣಗೌಡರು...

Narayan Gowda
Published on

ಮಂಡ್ಯ: ತೋಟಗಾರಿಕಾ ಸಚಿವ ನಾರಾಯಣ ಗೌಡ ಅವರು ಇಂದು ಸ್ವಲ್ಪದರಲ್ಲಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.

ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರು ಬರುತ್ತಿದ್ದಾಗ, ರಸ್ತೆ ಬದಿಯಲ್ಲಿದ್ದ ಕಲ್ಲುಬಂಡೆ ಏಕಾಏಕಿ ಸ್ಫೋಟಗೊಂಡಿದೆ. ಸಚಿವರು ಕೆ.ಆರ್.ಪೇಟೆಗೆ ಹೊರಟಿದ್ದರು.

ಬೆಂಗಳೂರು-ಜಲಸೂರು ರಸ್ತೆ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಹಗಲು ಹೊತ್ತಿನಲ್ಲಿಯೇ, ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ಬಂಡೆಯನ್ನು ಸ್ಫೋಟಿಸಿದ್ದಾನೆ. ಈ ಬಂಡೆ ಸ್ಫೋಟಗೊಳ್ಳುವುದಕ್ಕೂ, ಸಚಿವರ ಕಾರು ಅಲ್ಲಿ ಬರುವುದಕ್ಕೂ ಸರಿಯಾಗಿದ್ದು, ಸಚಿವರು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ.

ಕೆಶಿಫ್​ ರಸ್ತೆ ಕಾಮಗಾರಿ ನಡೆಸುತ್ತಿದ್ದ ಮೈಸೂರಿನ ಗುತ್ತಿಗೆದಾರ ಶ್ರೀನಿವಾಸ್​ ರಾಜ್​ ಅವರ ಬೇಜವಾಬ್ದಾರಿತನದ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net