More

  ಆಲಿಯಾ ಭಟ್ ತಾತ ನಿಧನ; ನನ್ನ ಹೃದಯ ದುಃಖದಿಂದ ತುಂಬಿದೆ ಎಂದ ನಟಿ

  ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರ ತಾತ ನರೇಂದ್ರನಾಥ್ ರಾಜ್ದಾನ್(94) ಅವರು ಮೃತಪಟ್ಟಿದ್ದಾರೆ. ತಾತನ ಅಗಲಿಕೆಗೆ ಆಲಿಯಾ ಸೋಶಿಯಲ್​​ ಮೀಡಿಯಾ ಮೂಲವಾಗಿ ಕಂಬನಿ ಮಿಡಿದಿದ್ದಾರೆ.

  94ವಯಸ್ಸಿನ ನರೇಂದ್ರನಾಥ್ ರಜ್ದಾನ್ ಇಂದು (ಜೂನ್ 1ರಂದು ಗುರುವಾರ) ನಿಧನರಾಗಿದ್ದಾರೆ. ರಜ್ದಾನ್ ಅವರು ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ರಜ್ದಾನ್ ಲಂಗ್ ಇನ್ ಫೆಕ್ಷನ್ ನಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಇಂದು ಮೃತಪಟ್ಟಿದ್ದಾರೆ.

  ಇದನ್ನೂ ಓದಿ: ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ; ಸಹಾಯಕ್ಕೆ ಬಾರದೆ ಕುಣಿದು ಕುಪ್ಪಳಿಸಿದ ಪತಿರಾಯ!

  ಅಜ್ಜನ 92 ನೇ ಹುಟ್ಟುಹಬ್ಬದ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಆಲಿಯಾ, “ನನ್ನ ಅಜ್ಜ ನನ್ನ ಹಿರೋ… 93ನೇ ವಯಸ್ಸಿನವರೆಗೆ ಗಾಲ್ಫ್ ಆಡಿದ್ದಾರೆ. ಕೆಲಸ ಮಾಡಿದ್ದಾರೆ. ನಮಗೆ ಅತ್ಯುತ್ತಮ ಕಥೆಗಳನ್ನು ಹೇಳಿದ್ದಾರೆ. ನನ್ನ ಹೃದಯವು ದುಃಖದಿಂದ ತುಂಬಿದೆ. ಅಜ್ಜ ನಡೆದು ಬಂದ ಹಾದಿಯಲ್ಲಿ ನಾನು ಬೆಳೆದು ಬಂದಿದ್ದು ನನಗೆ ಸಂತೋಷ ತಂದಿದೆ. ನಾನು ಅವರ ಆಶೀರ್ವಾದಕ್ಕೆ ಕೃತಜ್ಞಳಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

  ನರೇಂದ್ರ ಅವರ ಚಿಕಿತ್ಸೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟಿ ಆಲಿಯಾ ಅಭಿಮಾನಿಗಳು ಅವರ ತಾತನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಆದರೆ, ಅವರೆಲ್ಲರ ಪ್ರಾರ್ಥನೆಗೆ ಫಲ ಸಿಗಲಿಲ್ಲ.

  ಲಗೇಜ್​ಗೆ ಹೆಚ್ಚುವರಿ ಹಣ ಪಾವತಿಸಲು ನಿರಾಕರಣೆ; ಬಾಂಬ್​ ಭೀತಿ ಸೃಷ್ಟಿಸಿದ ಮಹಿಳೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts