More

    ಲಗೇಜ್​ಗೆ ಹೆಚ್ಚುವರಿ ಹಣ ಪಾವತಿಸಲು ನಿರಾಕರಣೆ; ಬಾಂಬ್​ ಭೀತಿ ಸೃಷ್ಟಿಸಿದ ಮಹಿಳೆ

    ಮುಂಬೈ: ಮಹಿಳಾ ಪ್ರಯಾಣಿಕರೊಬ್ಬರು ಲಗೇಜ್​ಗೆ ಹಣ ಪಾವತಿಸುವ ವಿಚಾರವಾಗಿ ಹುಸಿ ಬಾಂಬ್​ ಭೀತಿ ಸೃಷ್ಟಿಸಿದ ಘಟನೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಸುದ್ದಿ ಮೂಲಗಳ ಪ್ರಕಾರ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್​ನಲ್ಲಿ ಬಾಂಬ್​ ಇರುವುದಾಗಿ ಹೇಳಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣವನ್ನು ಸೃಷ್ಟಿಸಿದ್ದರು.

    Mumbai Airport
    ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ

    ಇದನ್ನೂ ಓದಿ: ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ; ಸಹಾಯಕ್ಕೆ ಬಾರದೆ ಕುಣಿದು ಕುಪ್ಪಳಿಸಿದ ಪತಿರಾಯ!

    ಬಾಂಬ್​ ಬೆದರಿಕೆ

    ಮುಂಬೈನಿಂದ ಕೊಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಮಹಿಳೆ ಹೆಚ್ಚುವರಿ ಲಗೇಜ್​ ಹೊಂದಿದ್ದನ್ನು ಗಮನಿಸಿದ ಸಿಬ್ಬಂದಿ ಹಣವನ್ನು ಪಾವತಿಸುವಂತೆ ಸೂಚಿಸಿದ್ದಾರೆ. ಈ ವೇಳೆ ಆಕೆ ತನ್ನ ಬ್ಯಾಗ್​ನಲ್ಲಿ ಬಾಂಬ್​ ಇರುವುದಾಗಿ ಹೇಳಿ ಶುಲ್ಕ ವಿನಾಯ್ತಿ ಪಡೆಯಲು ಯತ್ನಿಸಿದ್ದಾಳೆ.

    ವಿಮಾನ ನಿಲ್ದಾಣದ ಅಧಿಕಾರಿಗಳು ಮಹಿಳೆಯ ಬ್ಯಾಗ್​ ಪರಿಶೀಲಿಸಿದಾಗ ಅನುಮಾನಸ್ಪದ ವಸ್ತುಗಳು ಕಂಡು ಬಂದಿಲ್ಲ. ಈ ಕುರಿತು ಸಹರ್​ ಪೊಲೀಸ್​ ಠಾಣೆಯಲ್ಲಿ ಮಹಿಳೆಯ ವಿರುದ್ಧ ಭಾರತ ದಂಡ ಸಂಹಿತೆ(IPC Section) 336 ಮತ್ತು 505(2) ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts