More

    ಸಾಲದ ಹೊರೆಯಿಂದ ಮುಕ್ತರಾಗಲು ಸಾಮೂಹಿಕ ವಿವಾಹದ ಮೊರೆ ಹೋಗಿ, ಸಿದ್ದೇಶ್ವರ ಶ್ರೀ ಹೇಳಿಕೆ

    ಅಳವಂಡಿ: ಆಡಂಬರದ ಮದುವೆಯಿಂದ ಆರ್ಥಿಕ ಹೊರ ಹೆಚ್ಚುತ್ತದೆ ಎಂದು ಮೈನಳ್ಳಿ-ಬಿಕನಳ್ಳಿಯ ಶ್ರೀಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ಸಮೀಪದ ಮೈನಹಳ್ಳಿ-ಬಿಕನಳ್ಳಿಯ ಶ್ರೀಮದ್ ಉಜ್ಜಿನಿ ಶಾಖಾ ಹಿರೇಮಠದ ಮರುಳ ಸಿದ್ದೇಶ್ವರ ಜಾತ್ರೆ ಮಹೋತ್ಸವ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

    ಪ್ರಸ್ತುತ ದಿನಗಳಲ್ಲಿ ಸರಳ ಸಾಮೂಹಿಕ ವಿವಾಹಗಳ ಅಗತ್ಯವಿದೆ. ಜನಸಾಮಾನ್ಯರು ಸಾಲದ ಹೊರೆಯಿಂದ ಮುಕ್ತರಾಗಲು ಸಾಮೂಹಿಕ ವಿವಾಹದ ಮೊರೆ ಹೋಗುವುದು ಒಳಿತು ಎಂದು ಸಲಹೆ ನೀಡಿದರು.

    ಇದನ್ನೂ ಓದಿ: ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಹಿರೇಸಿಂದೋಗಿ ಕಪ್ಪತ್ ಮಠದ ಶ್ರೀ ಚಿದಾನಂದ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ದೇವರು ಮತ್ತು ಪ್ರಯತ್ನವನ್ನು ನಂಬಬೇಕು. ಪ್ರಯತ್ನದಲ್ಲೇ ದೇವರನ್ನು ಕಂಡಾಗ ಕೆಲಸದಲ್ಲಿ ಯಶಸ್ಸು ಸಾಧಿಸಬಹುದು.

    ಯಶಸ್ಸು ಸಿಕ್ಕಾಗ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದ ಅವರು, ನವ ದಂಪತಿಗಳು ಅನೋನ್ಯದಿಂದ ಜೀವನ ನಡೆಸಬೇಕು. ಸಂಸಾರವೆಂಬ ರಥ ಸರಿಯಾಗಿ ನಡೆದರೆ ಮಾತ್ರ ಬದುಕು ಯಶಸ್ವಿಯಾಗುತ್ತದೆ ಎಂದರು.

    ಇದನ್ನೂ ಓದಿ: ಇನ್ನೂ ನಿಂತಿಲ್ಲವೇ ಬಾಲ್ಯವಿವಾಹ? ಹನ್ನೊಂದರ ಬಾಲಕಿಯನ್ನು ಮದುವೆಯಾದ ನಲವತ್ತರ ಪುರುಷ!

    ಪ್ರಮುಖರಾದ ಹೇಮರಡ್ಡಿ ಬಿಸರಳ್ಳಿ, ಲಕ್ಷ್ಮಣ ಬೆಟಗೇರಿ, ಕುಬೇರಗೌಡ, ಭೀಮರಡ್ಡೆಪ್ಪ, ಸಿದ್ದರಡ್ಡಿ ಡಂಬ್ರಳ್ಳಿ, ವಾಸುರಡ್ಡಿ ಕಿನ್ನಾಳ, ಮುದಕಪ್ಪ ಕುರಿ, ಶಂಕ್ರಪ್ಪ ಓಜನಹಳ್ಳಿ, ಅಮೋಘ ಹಿರೇಮಠ, ನಾಗನಗೌಡ್ರ ಕುರಡಗಿ, ಸಿದ್ದಪ್ಪ ಬಾಸಿಂಗದಾರ, ವಸಂತ ಕರಿಗಾರ, ದೇವಪ್ಪ ಕಟ್ಟಿಮನಿ, ಶಿವರಡ್ಡಿ ಡಂಬ್ರಳ್ಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts