More

  ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

  ನವದೆಹಲಿ: ಕೆಲವೊಬ್ಬರು ಎರಡು ಮದುವೆಯಾಗುವುದಿದ್ದರೂ ಬಹಳಷ್ಟು ಇನ್ನೊಂದು ಸಂಸಾರ ಗುಟ್ಟಾಗಿಯೇ ಇರುತ್ತದೆ. ಆದರೆ ಇಲ್ಲೊಂದು ಕಡೆ ಒಬ್ಬನೇ ಇಬ್ಬರನ್ನು ಮದುವೆಯಾಗಿದ್ದರೂ ಇಬ್ಬರು ಪತ್ನಿಯರ ನಡುವೆ ಒಂದು ಒಪ್ಪಂದ ಏರ್ಪಟ್ಟಿದ್ದು, ಪತಿಗೆ ಪಾಳಿ ಮೇಲೆ ಸಂಸಾರ ನಡೆಸುವಂತಾಗಿದೆ.

  ಹರಿಯಾಣದ ಗುರುಗ್ರಾಮದಲ್ಲಿ ಸಾಫ್ಟ್​ವೇರ್​ ಉದ್ಯೋಗಿಯಾಗಿರುವ ವ್ಯಕ್ತಿಯೇ ಇಬ್ಬರು ಹೆಂಡಿರ ಮುದ್ದಿನ ಗಂಡ. 2018ರಲ್ಲಿ ಈತ 28 ವರ್ಷದ ಸೀಮಾ ಎಂಬಾಕೆಯನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಈ ದಂಪತಿಗೆ ಒಬ್ಬ ಪುತ್ರನೂ ಇದ್ದಾನೆ. ಆದರೆ 2020ರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದಾಗ ಈತ ಪತ್ನಿಯನ್ನು ಆಕೆಯ ಊರಾದ ಗ್ವಾಲಿಯರ್​ಗೆ ಕಳುಹಿಸಿದ್ದ.

  ಇದನ್ನೂ ಓದಿ: ಹತ್ತನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ; ಫ್ರೆಂಡ್ ಜತೆ ಮಾತನಾಡುತ್ತಲೇ ಕುಸಿದು ಬಿದ್ದು ಸಾವು

  ಅದಾದ ಮೇಲೆ ತುಂಬಾ ಸಮಯದ ಪತ್ನಿಯನ್ನು ಕರೆದುಕೊಂಡು ಬಂದಿರಲಿಲ್ಲ. ಈ ಮಧ್ಯೆ ಪತಿಗೆ ಕಚೇರಿಯಲ್ಲಿನ ಸಹೋದ್ಯೋಗಿ ಒಬ್ಬಳ ಜತೆ ಸಲಿಗೆ ಬೆಳೆದು ಒಟ್ಟಿಗೆ ನೆಲೆಸಲಾರಂಭಿಸಿದ್ದರು. ಮಾತ್ರವಲ್ಲ, ಇಬ್ಬರಿಗೆ ಒಂದು ಹೆಣ್ಣು ಮಗು ಕೂಡ ಆಗಿತ್ತು. ನಂತರ ಇವರಿಬ್ಬರು ಮದುವೆಗೆ ಮುಂದಾದಾಗ ಸೀಮಾಗೆ ವಿಷಯ ಗೊತ್ತಾಗಿ ಆಕೆ ಗುರುಗ್ರಾಮಕ್ಕೆ ಧಾವಿಸಿದ್ದಳು.

  ಇದನ್ನೂ ಓದಿ: ಬೆಂಗಳೂರು-ಮೈಸೂರು ಕೆಎಸ್​ಆರ್​ಟಿಸಿ ಪ್ರಯಾಣ ದರ ಹೆಚ್ಚಳ: ದಶಪಥದಲ್ಲಿ ಟೋಲ್ ಸಂಗ್ರಹ ಅಡ್ಡಪರಿಣಾಮ

  ಮಾತ್ರವಲ್ಲ, ಮಗನ ಆರೈಕೆಗಾಗಿ ಜೀವನಾಂಶ ನೀಡುವಂತೆ ಕೇಸ್ ದಾಖಲಿಸಲೂ ಮುಂದಾಗಿದ್ದಳು. ಈ ವಿಷಯ ತಿಳಿದ ಪತಿ, ಸೀಮಾಳನ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ಮುಂದಾದ. ಆದರೆ ಮಗನಿಗೆ ಸಿಗುವ ಜೀವನಾಂಶ ಆತನ ಭವಿಷ್ಯ ರೂಪಿಸಿಕೊಳ್ಳಲು ಸಾಲದು ಎಂಬ ಅರಿವೂ ಸೀಮಾಗೆ ಆಯಿತು. ನಂತರ ಈ ಪ್ರಕರಣ ಸಂಧಾನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮುಂದೆ ಹೋಯಿತು. ಅಲ್ಲಿ ಸೀಮಾ ಸಿನಿಮೀಯ ರೀತಿಯ ಒಂದು ಒಪ್ಪಂದಕ್ಕೆ ಬಂದಳು.

  ಇದನ್ನೂ ಓದಿ: ಡ್ರಮ್​ನೊಳಗೆ ಮಹಿಳೆಯ ಶವ ಪತ್ತೆ; ಅದೇ ಗ್ಯಾಂಗ್​ನ ಕೈವಾಡ ಶಂಕೆ!

  ಪತಿ ಜತೆ ಇಬ್ಬರೂ ಪತ್ನಿಯರು ಸಂಸಾರ ನಡೆಸುವುದು. ಆದರೆ ವಾರದಲ್ಲಿ ಮೂರು ದಿನ ಒಬ್ಬಳ ಜತೆ, ಇನ್ನು ಮೂರು ದಿನ ಇನ್ನೊಬ್ಬಳ ಜತೆ ಎಂಬ ಒಪ್ಪಂದವಾಗಿದ್ದು, ಇದಕ್ಕೆ ಇಬ್ಬರೂ ಪತ್ನಿಯರು ಒಪ್ಪಿದರು. ಅದರಂತೆ ಪತಿ ವಾರದಲ್ಲಿ ಮೂರು ದಿನ ಸೀಮಾ ಮತ್ತು ಮಗನ ಜತೆ ಹಾಗೂ ಇನ್ನು ಮೂರು ದಿನ ಎರಡನೇ ಪತಿ ಮತ್ತು ಮಗಳ ಜತೆ ಸಂಸಾರ ನಡೆಸುತ್ತಾನೆ. ಅದಕ್ಕೆಂದೇ ಗುರುಗ್ರಾಮದಲ್ಲಿ ಎರಡು ಮನೆಗಳನ್ನೂ ಮಾಡಿದ್ದಾನೆ. ವಿಶೇಷವೆಂದರೆ ವಾರದಲ್ಲಿ ಒಂದು ದಿನ ಅಂದರೆ ಭಾನುವಾರ ಇಬ್ಬರೂ ಪತ್ನಿಯರು ಪತಿಗೆ ಫ್ರೀ ಬಿಟ್ಟಿದ್ದು, ಆ ದಿನವನ್ನು ಆತ ತನ್ನಿಚ್ಛೆಯಂತೆ ಕಳೆಯಬಹುದಾಗಿದೆ. ಇಂಥದ್ದೊಂದು ಎರಡು ಸಂಸಾರದ ಕಥೆಯನ್ನು ಆಪ್ತಸಮಾಲೋಚಕ ಹರೀಶ್ ಎಂಬವರು ಮಾಧ್ಯಮದವರ ಜತೆ ಹಂಚಿಕೊಂಡಿದ್ದಾರೆ. –ಏಜೆನ್ಸೀಸ್

  ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts