ವಾರಾಣಸಿ, ಮಥುರಾ ದೇಗುಲ ಜಾಗವನ್ನು ಮುಸ್ಲಿಮರು ಬಿಟ್ಟುಕೊಡಲಿ; ಹೋರಾಟಕ್ಕೂ ನಿರ್ಧಾರ

mathura
Published on

ನವದೆಹಲಿ: ಶ್ರೀರಾಮ ಜನ್ಮಭೂಮಿ ಹೋರಾಟದ ಮಾದರಿಯಲ್ಲೇ ವಾರಾಣಸಿ ಹಾಗೂ ಮಥುರಾದಲ್ಲಿರುವ ದೇವಸ್ಥಾನಗಳಿಗಾಗಿಯೂ 'ಹಿಂದು ದೇಗುಲಗಳನ್ನು ಮುಕ್ತಗೊಳಿಸಿ' ಅಭಿಯಾನ ಆರಂಭಿಸುವುದಾಗಿ ಅಖಿಲ ಭಾರತೀಯ ಅಖಾಡಾ ಪರಿಷದ್​ ಘೋಷಿಸಿದೆ.

ಪ್ರಯಾಗ್​ರಾಜ್​ನಲ್ಲಿ ಏರ್ಪಾಡಾಗಿದ್ದ 13 ಧಾರ್ಮಿಕ ಅಖಾಡಾಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಖಾಡಾ ಪರಿಷದ್​ನ ಅಧ್ಯಕ್ಷ ಮಹಾಂತ್​ ನರೇಂದ್ರ ಗಿರಿ ಇದರ ಅಧ್ಯಕ್ಷತೆ ವಹಿಸಿದ್ದರು. ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥ ಮಂದಿರ, ಮಥುರಾದ ಕೃಷ್ಣ ಜನ್ಮಭೂಮಿಯನ್ನು ಮುಕ್ತಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಮೊಘಲರ ದಾಳಿಯಲ್ಲಿ ನಮ್ಮ ದೇಗುಲಗಳನ್ನು ಧ್ವಂಸಗೊಳಿಸಿ ಮಸೀದಿ ಹಾಗೂ ಸಮಾಧಿಗಳನ್ನು ಕಟ್ಟಲಾಗಿದೆ. ಸಂತರು ಅಯೋಧ್ಯೆ ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದೇರೀತಿ ವಾರಾಣಸಿ ಹಾಗೂ ಮಥುರಾದ ದೇಗುಲಗಳಿಗಾಗಿ ಹೋರಾಟ ನಡೆಸಲಾಗುವುದು. ದೇವಾಲಯದ ಧ್ವಂಸದ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮಹಾಂತ್​ ನರೇಂದ್ರ ಗಿರಿ ತಿಳಿಸಿದ್ದಾರೆ. ದೇಗುಲಗಳಿಗಾಗಿ ಹಿಂದುಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷದ್​ ಹಾಗೂ ಆರ್​ಎಸ್​ಎಸ್​ ನಡೆಸುವ ಕಾನೂನು ಹೋರಾಟಕ್ಕೂ ಅಖಾಡಾ ಪರಿಷದ್​ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.

ವಾರಾಣಸಿಯ ಗ್ಯಾನವ್ಯಾಪಿ ಮಸೀದಿಯ ಕೆಳಗೆ ಅಗೆತ ನಡೆಸಿದಾಗ ಅಲ್ಲೊಂದು ದೇಗುಲವಿತ್ತು ಎಂಬುದಕ್ಕೆ ಅವಶೇಷಗಳು ಪತ್ತೆಯಾಗಿವೆ. ಅಂತೆಯೇ, ಮಥುರಾದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಮಹಾಂತ್​ ನರೇಂದ್ರ ಗಿರಿ ತಿಳಿಸಿದ್ದಾರೆ. ಮುಸ್ಲಿಮರೇ ದೇಗುಲದ ಜಾಗವನ್ನು ಬಿಟ್ಟು ಕೊಟ್ಟು ಆದರ್ಶವನ್ನು ಮರೆಯಬೇಕು. ಈ ನಿಟ್ಟಿನಲ್ಲಿ ಅವರ ಮನವೊಲಿಸುವ ಕೆಲಸವನ್ನೂ ನಡೆಸಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net