

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಭಗವಂತನ ನಾಮ ಸ್ಮರಣೆ ಮಾಡುವುದು ದೇವರಿಗೆ ಅತ್ಯಂತ ಪ್ರಿಯವಾದ ಸೇವೆಯಾಗಿದೆ. ಭಕ್ತಿಯಿಂದ ಭಜನೆ ಮಾಡಿದರೆ ದೇವರು ಸಂಪ್ರೀತರಾಗಿ ಆಶೀರ್ವದಿಸುತ್ತಾರೆ ಎಂಬುದು ಹಿರಿಯರು ಕಂಡುಕೊಂಡ ಸತ್ಯ. ಶ್ರೀ ದೇವಳದಲ್ಲಿ ಅಹರ್ನಿಶಿಯಾಗಿ ಭಜನೆ ಮೂಲಕ ಭಗವಂತನ ಆರಾಧನೆ ಜಾತ್ರಾ ಮಹೋತ್ಸವದ ಆರಂಭದ ದಿನ ನಡೆಯುವುದು ಶುಭ ಸಂಕೇತ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು.
ಜಾತ್ರೋತ್ಸವದ ಆರಂಭದ ದಿನವಾದ ಬುಧವಾರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ಜಾತ್ರೋತ್ಸವದ ಅಂಗವಾಗಿ ನಡೆದ ಏಕಾಹ ಅಖಂಡ ಭಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ದೇವಳದ ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆಂಟ್ ರಾಜಲಕ್ಷ್ಮೀ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಾಧವ ಡಿ, ಮಾಸ್ಟರ್ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಮ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯೆ ವಿಮಲಾ ರಂಗಯ್ಯ, ಗ್ರಾ.ಪಂ.ಸದಸ್ಯೆ ಸೌಮ್ಯಾ ಭರತ್, ನಿವೃತ್ತ ಮುಖ್ಯಶಿಕ್ಷಕ ಕೆ.ಯಶವಂತ ರೈ, ವಿದ್ಯಾಸಾಗರ ಭಜನಾ ಸಂಗಮದ ಸಂಸ್ಥಾಪಕ ಗಣೇಶ್ ಪರ್ವತಮುಖಿ, ಸದಸ್ಯರಾದ ಕಾರ್ತಿಕ್ ವಿದ್ಯಾನಗರ, ಶೇಖರ್ ಕೇದಿಗೆಬನ, ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ಎ.ಸುಬ್ರಹ್ಮಣ್ಯ ರಾವ್, ಗೋಪಾಲ ಎಣ್ಣೆಮಜಲು, ಲೋಕೇಶ್ ಬಿ.ಎನ್, ಪ್ರಕಾಶ್ ಸುಬ್ರಹ್ಮಣ್ಯ, ರತ್ನಾವತಿ ನೂಚಿಲ, ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ, ದೇವಳದ ಯೋಗೀಶ್ ಎಂ.ವಿಟ್ಲ, ಭಾನುಮತಿ, ಪವಿತ್ರಾ, ಬಾಲಕೃಷ್ಣ ರೈ, ಸಂದೇಶ್ ನಾಯಕ್, ಬೆಳ್ಳಿ, ಸದಾನಂದ, ಅಶೋಕ್ ಅತ್ಯಡ್ಕ, ಎನ್.ಸಿ.ಸುಬ್ಬಪ್ಪ ಉಪಸ್ಥಿತರಿದ್ದರು.