

ಮಂಗಳೂರು: ಅಡಕೆ ಅಕ್ರಮ ಆಮದಿಗೆ ತಡೆಯಬೇಕು, ಮೈಲು ತುತ್ತು ಮೇಲಿನ ಜಿಎಸ್ಟಿ ದರ ಶೇ.5ಕ್ಕೆ ಇಳಿಸುವುದು, ಎಫ್ಎಸ್ಎಸ್ಐ ಅವರು ನಿರ್ದಿಷ್ಟಪಡಿಸಿದ ಮಾಯ್ಚರ್ ಪ್ರಮಾಣ ಶೇ.7ರಿಂದ 11ಗೆ ಏರಿಸಬೇಕು ಮೊದಲಾದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಸಂಸದರಾದ ಬಿ.ವೈ.ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾ.ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಸಾಗ ಮತ್ತು ಶಿರಸಿ ಪ್ರಾಂತ್ಯದ ರೈತರ ಪ್ರತಿನಿಧಿಗಳಾದ ಎಚ್.ಎಸ್.ಮಂಜಪ್ಪ ಸೊರಬ ಹಾಗೂ ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರ ನಿಯೋಗ ಭೇಟಿ ಮಾಡಿ ಸಲ್ಲಿಸಿದ ಮನವಿಗೆ ಅವರು ಶೀಘ್ರ ಗಮನ ಹರಿಸುವುದಾಗಿ ತಿಳಿಸಿದ್ದಾರೆ.
ನಿಯೋಗದಲ್ಲಿ ಯು.ಟಿ.ರಾಮಪ್ಪ, ಅನಿಲ ಒಡೆಯರ್, ಮಲ್ಲಿಕಾರ್ಜುನ ಸಾಗರ, ಟಿ.ಎಸ್.ಎಸ್.ನ ಪ್ರಧಾನ ವ್ಯವಸ್ಥಾಪಕ ಗಿರೀಶ ಹೆಗಡೆ ಮೊದಲಾದವರಿದ್ದರು.