

ಮುಂಬೈ: ಮಂಬೈಯಿಂದ ವಾರಣಾಸಿಗೆ ಹೊರಟಿದ್ದ ಅಕಾಸ ಫ್ಲೈಟ್ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆಯಿಂದಾಗಿ ತುರ್ತು ಭೂಸ್ಪರ್ಶವನ್ನು ಮಾಡಿದೆ. ವಾರಣಾಸಿ ಏರ್ ಟ್ರಾಫಿಕ್ ಕಂಟ್ರೋಲರ್ನಿಂದ ತುರ್ತು ಎಚ್ಚರಿಕೆಯ ಸಂದೇಶ ಸ್ವೀಕರಿಸಿದ್ದ QP 1498 ಫ್ಲೈಟ್ನ ಕ್ಯಾಪ್ಟನ್ ಅಗತ್ಯ ಕ್ರಮಗಳನ್ನು ಪೂರೈಸಿ, ವಿಮಾನವನ್ನು ವಾರಣಾಸಿಯಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ.
ಬೆಳಿಗ್ಗೆ 11:30 ರ ಸುಮಾರಿಗೆ ಸಾಮಾಜಕ ಜಾಲತಾಣ X ನಲ್ಲಿ ಬಾಂಬ್ ಬೆದರಿಕೆಯ ಕುರಿತಾಗಿ ಟ್ಟೀಟ್ ಬಂದಿರುವ ಹಿನ್ನೆಲೆ ವಿಮಾನವು ತುರ್ತು ಭೂ ಸ್ಪರ್ಶ ಮಾಡಬೇಕಾಯಿತು.
ಪ್ರಕರಣದ ಕುರಿತಂತೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈಗಾಗಲೇ ಪೊಲೀಸರು FIR ದಾಖಲಿಸಿದ್ದಾರೆ. ಆಕಾಶ ಏರ್ಲೈನ್ಸ್ ನೀಡಿದ ಮಾಹಿತಿಯ ಪ್ರಕಾರ, ವಿಮಾನದಲ್ಲಿ 166 ಮಂದಿ, ಒಂದು ಮಗು ಮತ್ತು 6 ಮಂದಿ ಕ್ರೂ ಸದಸ್ಯರು ಪ್ರಯಾಣಿಸುತ್ತಿದ್ದರು.
ವಾರಣಅಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ವಿಮಾನ ರನ್ವೇಗೆ ತಲುಪುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಗೆ ವಿಮಾನದ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ವಾರಣಾಸಿಗೆ ತೆರಳಬೇಕಿದ್ದ ಆಕಾಶ ಏರ್ ಫ್ಲೈಟ್ QP 1498, ಏರ್ ಟ್ರಾಫಿಕ್ ಕಂಟ್ರೋಲ್ನಿಂದ ತುರ್ತು ಎಚ್ಚರಿಕೆಯನ್ನು ಸ್ವೀಕರಿಸಿದೆ. ಫ್ಲೈಟ್ನ ಕ್ಯಾಪ್ಟನ್ ಅಗತ್ಯವಿರುವ ಎಲ್ಲಾ ತುರ್ತು ವಿಧಾನಗಳನ್ನು ಅನುಸರಿಸಿದ್ದು, ವಿಮಾನವನ್ನ ತುರ್ತಾಗಿ ವಾರಣಾಸಿಯಲ್ಲಿ ಲ್ಯಾಂಡ್ ಮಾಡಿದ್ದಾರೆ ಎಂದು ಏರ್ಲೈನ್ಸ್ ಸ್ಪಷ್ಟನೆ ನೀಡಿದೆ.