WTC ಫಿನಾಲೆ| ಭಾರತ ತಂಡ ಪ್ರಕಟ; ಅಜಿಂಕ್ಯ ರಹಾನೆ ಪುನರಾಗಮನ

WTC
Published on

ನವದೆಹಲಿ: ಇಂಗ್ಲೆಂಡ್​ನ ಓವಲ್​ ಕ್ರೀಡಾಂಗಣದಲ್ಲಿ ಜೂನ್​ 7ರಿಂದ 11ರವರೆಗೆ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​(WTC) ಫಿನಾಲೆಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(BCCI) ಮಂಗಳವಾರ 15 ಸದಸ್ಯರ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.

ಬೆನ್ನು ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬ್ಯಾಟ್ಸ್​​ಮ್ಯಾನ್​ ಶ್ರೇಯಸ್​ ಅಯ್ಯರ್ ಬದಲು ಅಜಿಂಕ್ಯ ರಹಾನೆ 15 ತಿಂಗಳ ಬಳಿಕ ತಂಡಕ್ಕೆ ವಾಪಸ್ಸಾಗಿದ್ದಾರೆ.

ತಂಡ ಇಂತಿದೆ

ರೋಹಿತ್​ ಶರ್ಮಾ(ನಾಯಕ), ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್​. ರಾಹುಲ್​, ಕೆ.ಎಸ್​. ಭರತ್​(ವಿ.ಕೀ), ರವಿಚಂದ್ರನ್​ ಅಶ್ವಿನ್​​, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​, ಶರ್ದೂಲ್​ ಠಾಕೂರ್​, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​, ಉಮೇಶ್​ ಯಾದವ್, ಜಯದೇವ್​ ಉನದ್ಕತ್​​ ತಂಡದಲ್ಲಿ ಸ್ಥಾನದಲ್ಲಿ ಪಡೆದಿರುವ ಆಟಗಾರರು.

ಸೂರ್ಯ-ಇಶಾನ್​ಗೆ ಕೊಕ್​

ಇನ್ನು ಈ ವರ್ಷ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯಲ್ಲಿ ರನ್​ ಗಳಿಸಲು ಪರದಾಡಿದ ಬ್ಯಾಟ್ಸ್​​ಮ್ಯಾನ್​ ಸೂರ್ಯಕುಮಾರ್ ಯಾದವ್​ಗೆ ತಂಡದಲ್ಲಿ ಸ್ಥಾನ ದೊರೆತ್ತಿಲ್ಲ. ವಿಕೆಟ್​ ಕೀಪರ್ ಬ್ಯಾಟ್ಸ್​ಮ್ಯಾನ್​ ಇಶಾನ್​ ಕಿಶನ್​ ಕೂಡ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net