

ನವದೆಹಲಿ: ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಆರ್ಡರ್ ಅಫ ಆಸ್ಟ್ರೇಲಿಯಾ(AO) ಪ್ರಶಸ್ತಿಯನ್ನು ಅವರಿಗೆ ಭಾರತದಲ್ಲಿರುವ ರಾಯಭಾರಿ ಬ್ಯಾರಿ ಓ ಫಾರೆಲ್ ರತನ್ ಟಾಟಾ ಅವರಿಗೆ ನೀಡಿ ಗೌರವಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆಸ್ಟ್ರೇಲಿಯಾ ರಾಯಭಾರಿ ಬ್ಯಾರಿ ಓ ಫಾರೆಲ್ ರತನ್ ಟಾಟಾ ಅವರು ಉದ್ಯಮ, ವ್ಯಾಪಾರ, ಲೋಕೋಪಕಾರದ ಪ್ರೀಕವಾಗಿದ್ದಾರೆ. ಅವರ ಪ್ರತಿಭೆ ಹಾಗೂ ಕೊಡುಗೆ ಆಸ್ಟ್ರೇಲಿಯಾ ಮೇಲೆ ಪ್ರಭಾವ ಬೀರಿದ್ದು ಇದರ ಪರಿಣಾಮ ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿರುವ ಫಾರೆಲ್ ರತನ್ ಟಾಟಾ ಅವರ ಕೊಡುಗೆ ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಕೊಂಡಿಯಾಗಿದೆ ಎಂದು ತಿಳಿಸಿದ್ಧಾರೆ.