ಭಾಷಣದ ವೇಳೆ ಕೈ ಕೊಟ್ಟ ಮೈಕ್​; ಸಿಎಂ ಬೊಮ್ಮಾಯಿ ಸಿಡಿಮಿಡಿ

CM Bommai
Published on

ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ತಮ್ಮ ಪಕ್ಷಗಳ ಪರ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಇನ್ನು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಜಯವಾಹಿನಿ ಎಂಬ ಹೆಸರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ರೋಡ್​ ಶೋ ಹಮ್ಮಿಕೊಳ್ಳುವ ಮೂಲಕ ಮತಬೇಟೆಗೆ ಇಳಿದಿದ್ಧಾರೆ.

ಸಿಎಂ ಸಿಡಿಮಿಡಿ

ಇನ್ನು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶಾಸಕ ಅರವಿಂದ್​ ಬೆಲ್ಲದ್​ ಪರ ನವಲೂರ ಬಡಾವಣೆ ಸೇರಿದಂತೆ ಸುತ್ತಮುತ್ತ ರೋಡ್​ ಶೋ ನಡೆಸಿದ್ಧಾರೆ.

campaign

ಇನ್ನು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ವೇಳೆ ಮೈಕ್​ ಕೈ ಕೊಟ್ಟಿದ್ದು ಸಿಎಂ ಬೊಮ್ಮಾಯಿ ಆಯೋಜರ ವಿರುದ್ಧ ಸಿಡಿಮಿಡಿಗೊಂಡ ಘಟನೆ ನಡೆದಿದೆ.

ಏನ್​ ದನ ಕಾಯ್ತಾರಪ್ಪ

ಇನ್ನು ಮೈಕ್​ ಕೈಕೊಟ್ಟಿದ್ದಕ್ಕೆ ಸಿಡಿಮಿಡಿಗೊಂಡ ಸಿಎಂ ಏನ್​ ದನ ಕಾಯ್ತಾರಪ್ಪ ಸೆಲ್ ಹಾಕಿಸಿ ತಗೊಂಡು ಬನ್ನಿ. ಇಲ್ಲವಾದಲ್ಲಿ ಬೇರೆ ವಾಹನದ ಅಥವಾ ಆಟೋಗೆ ಕಟ್ಟಿರುವ ಧ್ವನಿವರ್ಧಕದ ಮೈಕ್​ ತಗೊಂಡು ಬನ್ನಿ ಎಂದು ಸಿಎಂ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net