ಮುಂಬೈ: ನಟಿ ಐಶ್ವರ್ಯಾ ರೈ ಬಚ್ಚನ್ 1997ರಲ್ಲಿ ‘ಔರ್ ಪ್ಯಾರ್ ಹೋ ಗಯಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ತನ್ನ ವೃತ್ತಿಜೀವನದಲ್ಲಿ ಅನೇಕ ಯಶಸ್ವಿ ಸಿನಿಮಾಗಳನ್ನು ನೀಡಿರುವ ನಟಿ ಅದ್ಭುತ ನಟನೆಗೆ ಹೆಸರುವಾಸಿಯಾಗಿದ್ದಾರೆ.
ಇದನ್ನು ಓದಿ: ನಾಗಚೈತನ್ಯ ಖಿನ್ನತೆಗೊಳಗಾಗಿದ್ದ.. ಈಗ ಅವನಲ್ಲಿ ಸಂತೋಷ ಕಾಣುತ್ತಿದೆ: ನಾಗಾರ್ಜುನ
ಸಂದರ್ಶನವೊಂದರಲ್ಲಿ ನಟಿ ಐಶ್ವರ್ಯಾ ರೈ ಅವರನ್ನು ಸಿನಿಮಾಗಳಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ನಟಿ ಈ ರೀತಿಯ ದೃಶ್ಯಗಳನ್ನು ಮುಂದೆ ಆಲೋಚಿಸಿ ಮಾಡಲು ಸಾಧ್ಯವಿಲ್ಲ. ನಾನು ನನ್ನ ಕಥೆಗೆ ಬದ್ಧವಾಗಿರುತ್ತೇನೆ. ಪಾತ್ರದ ಬೇಡಿಕೆಯನ್ನು ಅರ್ಥಮಾಡಿಕೊಂಡು ಆ ದೃಶ್ಯಗಳನ್ನು ಮಾಡುತ್ತೇನೆ ಎಂದು ಹೇಳಿದರು.
ನನ್ನೊಂದಿಗಿನ ಚುಂಬನದ ದೃಶ್ಯ ಅಥವಾ ಇಂಟಿಮೇಟ್ ದೃಶ್ಯಗಳು ಎಷ್ಟು ಚರ್ಚೆಯ ವಿಷಯವಾಗಿದೆ ಎಂದು ನನಗೆ ತಿಳಿದಿದೆ. ಇದು ಕೇವಲ ಸಿನಿಮಾದ ದೃಶ್ಯವಾಗಿರಬಹುದು ಆದರೆ ನನಗೆ ದೊಡ್ಡ ವಿಷಯವಾಗುತಿತ್ತು. ಧೂಮ್ 2 ಚಿತ್ರದ ಉದಾಹರಣೆಯನ್ನು ನೀಡಿದ ನಟಿ ಐಶ್ವರ್ಯಾ, ಸಿನಿಮಾದಲ್ಲಿ ಹೃತಿಕ್ ರೋಷನ್ ಅವರೊಂದಿಗೆ ಚುಂಬನದ ದೃಶ್ಯ ಮಾಡಬೇಕಾಗಿತ್ತು. ಈ ದೃಶ್ಯವು ಆ ಸಮಯದಲ್ಲಿ ಹೆಚ್ಚು ಚರ್ಚೆಯಾಗಿ ವಿವಾದಾಸ್ಪದವಾಗಿದ್ದು ನನಗೆ ತಿಳಿದಿದೆ ಎಂದು ಐಶ್ವರ್ಯಾ ಹೇಳಿದರು.
ಭಾರತದಲ್ಲಿ ಸಮಾಜ ಮತ್ತು ಕುಟುಂಬವು ಸಿನಿಮಾ ಸೆಲಿಬ್ರಿಟಿಗಳ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ನಮ್ಮ ಪ್ರತಿಯೊಂದು ನಡೆಯನ್ನು ಗಮನಿಸುತ್ತಾರೆ. ಆದ್ದರಿಂದ ಕುಟುಂಬ ಮತ್ತು ಅಭಿಮಾನಿಗಳ ಭಾವನೆಯನ್ನು ಪರಿಗಣನೆಗೆ ತೆಗೆದುಕೊಂಡು ಯೋಚಿಸಬೇಕಾಗುತ್ತದೆ. ಆದರೆ ಕಲಾವಿದೆಯಾಗಿ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಕೆಲವೊಮ್ಮೆ ಕಷ್ಟವಾಗುತ್ತದೆ ಆದರೆ ನಮ್ಮ ಕೆಲಸದ ಮೇಲೆ ಗಮನ ಕೇಂದ್ರಿಕರಿಸಬೇಕು. ಪಾತ್ರ ಮತ್ತು ಕಥೆಗೆ ಬದ್ಧರಾಗಿರುತ್ತೇನೆ ಎಂದು ತಿಳಿಸಿದರು. (ಏಜೆನ್ಸೀಸ್)
ಅಭಿಮಾನಿಗಳಿಗೆ ಮಾದರಿ ಆಗಬೇಕಾದ್ರೆ ಇದನ್ನು ಮಾಡಬಾರದು; ಜಾನ್ ಅಬ್ರಾಹಂ