ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧಿಗಳಾಗಲಿದ್ದಾರೆ ಪತಿ-ಪತ್ನಿ !; ಪ್ರತಿಷ್ಠಿತ ಕುಟುಂಬದ 'ಬಹಿರಂಗ' ರಾಜಕಾರಣ?

Bihar Election
Published on

ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಒಂದು ಕುತೂಹಲಕಾರಿ ಸಂಗತಿ ಎಲ್ಲೆಡೆ ಹರಿದಾಡುತ್ತಿದೆ.

ಮಾಹುವಾ ವಿಧಾನಸಭಾ ಕ್ಷೇತ್ರದಲ್ಲಿ ಪತಿ-ಪತ್ನಿಯ ನಡುವೆಯೇ ನೇರ ಸ್ಪರ್ಧೆ ಏರ್ಪಡಿಲಿದೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.

ರಾಷ್ಟ್ರೀಯ ಜನತಾ ದಳ(ಆರ್​ಜೆಡಿ)ದ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಅವರ ಹಿರಿಯ ಪುತ್ರ ತೇಜ್​ ಪ್ರತಾಪ್ ಯಾದವ್ ಮಾವ ಚಂದ್ರಿಕಾ ರಾಯ್ ಅವರು ನಿನ್ನೆ ಆರ್​ಜೆಡಿಯ ವಿರೋಧ ಪಕ್ಷ ಜನತಾ ದಳ (ಯುನೈಟೆಡ್​)ಗೆ ಸೇರಿದ್ದಾರೆ. ತೇಜ್​ ಪ್ರತಾಪ್​ ಯಾದವ್​ ಮತ್ತು ಚಂದ್ರಿಕಾ ರಾಯ್​ ಅವರ ಪುತ್ರಿ ಐಶ್ವರ್ಯಾ ವಿವಾಹವಾಗಿದ್ದರೂ, ಕಳೆದ ವರ್ಷವೇ ಬೇರ್ಪಟ್ಟಿದ್ದಾರೆ.

ಇದೀಗ ಮಾಹುವಾದಿಂದ ಚಂದ್ರಿಕಾ ರಾಯ್​ ಮಗಳು ಐಶ್ವರ್ಯಾ ಅವರು ಜೆಡಿಯುದಿಂದ ಸ್ಪರ್ಧಿಸಲಿದ್ದಾರೆ. ಹಾಗೇ ಆರ್​ಜೆಡಿಯಿಂದ ತೇಜ್ ಪ್ರತಾಪ್​ ಯಾದವ್​ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿದೆ. ಇದನ್ನೂ ಓದಿ: ಲಾಡ್ಜ್​ವೊಂದರ ಬಾತ್​ರೂಮ್​ನಲ್ಲಿದ್ದ ಸಣ್ಣ ಕನ್ನಡಿ ನೂಕಿದ ಪೊಲೀಸರಿಗೆ ಕಾದಿತ್ತು ಶಾಕ್​!

ಅಷ್ಟೇ ಅಲ್ಲ, ನಿನ್ನೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚಂದ್ರಿಕಾ ರೈ ಕೂಡ ತಮ್ಮ ಮಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನೂ ಓದಿ: 18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ ಅಜ್ಜಿ: ಹುಬ್ಬೇರಿಸೋ ಮುನ್ನ ಒಮ್ಮೆ ಓದಿ ಬಿಡಿ!

ಪ್ರಸ್ತುತ ತೇಜ್​ಪ್ರತಾಪ್​ ಯಾದವ್​ ಅವರು ಮಾಹುವಾದ ಶಾಸಕ. ಮುಂದಿನ ಚುನಾವಣೆಯಲ್ಲಿ ಒಮ್ಮೆ ಪತಿ-ಪತ್ನಿ ನಡುವೆ ಸ್ಪರ್ಧೆ ಏರ್ಪಟ್ಟರೆ ಗೆಲುವು ಯಾರಿಗೆ? ಎಂಬ ಕುತೂಹಲ ಮೂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net