Irumudi : ಶಬರಿಮಲೆ ಭಕ್ತರಿಗೆ ಶುಭಸುದ್ದಿ: 'ಇರುಮುಡಿ'ಯೊಂದಿಗೆ ವಿಮಾನ ಪ್ರಯಾಣ!

irumudi -2222
Published on

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಇರುಮುಡಿ(Irumudi) ಹೊತ್ತ ಭಕ್ತರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಶುಭ ಸುದ್ದಿ ನೀಡಿದೆ. ಇನ್ನು ಮುಂದೆ 'ಇರುಮುಡಿ'ಯೊಂದಿಗೆ ವಿಮಾನ ಪ್ರಯಾಣ ಮಾಡಬಹುದಾಗಿದೆ.

ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರು ದೇಶ, ವಿದೇಶಗಳಲ್ಲಿ ಇದ್ದಾರೆ. ಅಂತಹವರು ಇನ್ನು ಮುಂದೆ ಇರುಮುಡಿ ಹೊತ್ತು ವಿಮಾನದ ಮೂಲಕ ನೇರವಾಗಿ ಶಬರಿಮಲೆಗೆ ಬರಬಹುದು ಎಂದು ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಹೀಗೆ ತಿಳಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಯಾತ್ರಾರ್ಥಿಗಳು ಕೇರಳದ ಶಬರಿಮಲೆಗೆ ನೇರವಾಗಿ ತೆರಳಬಹುದು. ಅಯ್ಯಪ್ಪ ಸ್ವಾಮಿ ಭಕ್ತರ ಮನವಿ ಮೇರೆಗೆ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಅವರು ತಿಳಿಸಿದರು.

ಅದರಂತೆ ನಾಗರಿಕ ವಿಮಾನಯಾನ ಭದ್ರತಾ ವಿಭಾಗದ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಶ್ರೀಕಾಕುಳಂನಲ್ಲಿರುವ ಶಿಬಿರ ಕಚೇರಿಯಲ್ಲಿ ಶನಿವಾರ ಸಚಿವರು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ.

ಸುರಕ್ಷತೆಯ ಕಾರಣಗಳಿಗಾಗಿ ತೆಂಗಿನಕಾಯಿಯೊಂದಿಗೆ ಇರುಮುಡಿಯನ್ನು ವರ್ಷಗಳವರೆಗೆ ವಿಮಾನದಲ್ಲಿ ಅನುಮತಿಸಲಾಗಿಲ್ಲ. ಇದರಿಂದ ಭಕ್ತರು ಇಲ್ಲಿತನಕ ರೈಲು, ಬಸ್, ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು ಎಂದರು.

ಅಯ್ಯಪ್ಪ ಸ್ವಾಮಿ ಭಕ್ತರ ಮನವಿ ಮೇರೆಗೆ ನಿಯಮಗಳನ್ನು ಸಡಿಲಿಸಲಾಗಿದ್ದು, ಮಕರಜ್ಯೋತಿ ದರ್ಶನ ಮುಗಿಯುವವರೆಗೆ (ಜನವರಿ 20) ಈ ಸೌಲಭ್ಯ ಇರಲಿದೆ. ಈ ಆದೇಶಗಳೊಂದಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಸ್ಕ್ಯಾನ್ ಮಾಡಿದ ನಂತರ, ಭಕ್ತರು ನೇರವಾಗಿ ಇರುಮುಡಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net