ನವದೆಹಲಿ: ಕ್ರಿಪ್ಟೋ ಅಕ್ರಮ ಕರೆನ್ಸಿಯಾಗಿದ್ದರೂ ಅನೇಕ ವ್ಯವಹಾರಗಳಿಗೆ ಇದನ್ನು ಬಳಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಇದರ ವಹಿವಾಟು ಸಹ ಹೆಚ್ಚಳವಾಗಿದೆ. ಇದನ್ನು ಜಾಗತಿಕವಾಗಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆರ್‌ಬಿಐ(RBI) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: Telangana: ಡಿಸಿ ಏನ್ಮಾಡ್ತಿದ್ದಾರೆ? ಗಂಡನ ಪಕ್ಕ ಮಲಗಿದ್ದಾರಾ? ಸಂಚಲನ ಮೂಡಿಸಿದ ಕಾಂಗ್ರೆಸ್ ಮಾಜಿ ಶಾಸಕನ ಕಾಮೆಂಟ್ಸ್
ಪೀಟರ್‌ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಶನಲ್ ಎಕನಾಮಿಕ್ಸ್‌ನಲ್ಲಿ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕ್ರಿಪ್ಟೋ ಕರೆನ್ಸಿ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಜನರು ಕ್ರಿಪ್ಟೋ ಕಡೆಗೆ ಹೆಚ್ಚು ಒಲವು ತೋರಿದರೆ ಕೇಂದ್ರ ಬ್ಯಾಂಕ್ ಹಣ ಪೂರೈಕೆಯ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಳ್ಳಬಹುದು. ಕ್ರಿಪ್ಟೋ ಆರ್ಥಿಕ ಸ್ಥಿರತೆಯ ಜೊತೆಗೆ ವಿತ್ತೀಯ ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ಹೇಳಿದರು.
ಆರ್ಥಿಕ ವ್ಯವಸ್ಥೆಯಲ್ಲಿ ಏನಾದರೂ ಸ್ವೀಕಾರಾರ್ಹವಲ್ಲ ಎಂದಾಗ ಅದನ್ನು ನಿಷೇಧಿಸುವುದು ಉತ್ತಮ. ಇದಕ್ಕೆ ನಾನು ಬೆಂಬಲಿಸುತ್ತೇನೆ. ಅದನ್ನು ಸರಿಯಾದ ಸಮಯಕ್ಕೆ ನಿಲ್ಲಿಸದಿದ್ದರೆ, ಆರ್ಥಿಕವಾಗಿ ದೊಡ್ಡ ಅಪಾಯವನ್ನುಂಟುಮಾಡುತ್ತದೆ. ಕೇಂದ್ರ ಬ್ಯಾಂಕ್(ಆರ್‌ಬಿಐ) ಹಣದ ಪೂರೈಕೆಯ ಮೇಲೆ ನಿಯಂತ್ರಣವನ್ನು ಕಳೆದುಕೊಂಡರೆ, ಅದು ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಸಂಭವಿಸಿದ ನಂತರ, ಕೇಂದ್ರ ಬ್ಯಾಂಕ್ ಹಣಕಾಸು ವ್ಯವಸ್ಥೆಯ ದ್ರವ್ಯತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಇದಲ್ಲದೇ ದೇಶದಲ್ಲಿ ಹಣದುಬ್ಬರವೂ ಗರಿಷ್ಠ ಮಟ್ಟ ತಲುಪಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು.
ಕ್ರಿಪ್ಟೋ ಅಪಾಯಗಳನ್ನು ಅರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ವಾಸ್ತವವಾಗಿ, ಕ್ರಿಪ್ಟೋ ವಹಿವಾಟುಗಳು ಜಾಗತಿಕವಾಗಿ ನಡೆಯುತ್ತಿವೆ. ಇದು ಒಂದು ದೇಶಕ್ಕೆ ಮಾತ್ರವಲ್ಲದೆ ಎಲ್ಲರಿಗೂ ಸಾಕಷ್ಟು ಅಪಾಯಕಾರಿ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದೇಶಗಳು ಒಗ್ಗೂಡಿ ಕ್ರಿಪ್ಟೋ ವಿರುದ್ಧ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಿಪ್ಟೋ ಪ್ರವೃತ್ತಿಯು ಹೀಗೆಯೇ ಮುಂದುವರಿದರೆ, ಅದು ಪ್ರಪಂಚದ ಎಲ್ಲಾ ಕೇಂದ್ರ ಬ್ಯಾಂಕ್‌ಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ವರ್ಷ ಜಿ-20 ಶೃಂಗಸಭೆಯುಲ್ಲಿ ಪ್ರಶ್ನೆ ಎತ್ತುವ ಮೊದಲ ದೇಶ ಭಾರತವಾಗಿದೆ ಎಂದರು.
Priyanka Mohan: ಜಯಂ ರವಿಯೊಂದಿಗೆ ನಿಶ್ಚಿತಾರ್ಥ..ನಟಿ ಹೇಳಿದ್ದೇನು ಗೊತ್ತಾ?