ಸುಡಾನ್​ ಬಿಕ್ಕಟ್ಟು ಉಲ್ಬಣ; ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ, 40 ಮಂದಿ ಸಾವು

Sudan Airstrike
Published on

ಸುಡಾನ್​: ಸುಡಾನ್​ನಲ್ಲಿ ಸೇನಾ ಪಡೆ ಹಾಗೂ ಅರಸೇನಾ ಪಡೆ ನಡುವಿನ ಕಾಳಗ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ರಾಜಧಾನಿ ಖಾರ್ಟೂಮ್​ ಮೇಲೆ ನಡೆಸಲಾದ ವೈಮಾನಿಕ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟಟ್ಟಿರುವುದಾಗಿ ವರದಿಯಾಗಿದೆ.

ದಕ್ಷಿಣ ಖಾರ್ಟೂಮ್​ನ ಮಾರುಕಟ್ಟೆ ಪ್ರದೇಶದ ಮೇಲೆ ಬೆಳಗ್ಗೆ 7:15ರ ಸುಮಾರಿಗೆ ವೈಮಾನಿಕ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳೀಯ ತುರ್ತು ಕೊಠಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್​ 15ರಂದು ಸುಡಾನ್​ನಲ್ಲಿ ಸೇನಾ ಪಡೆದ ಹಾಗೂ ಅರೆಸೇನಾ ಪಡೆ ನಡುವೆ ಆರಂಭವಾದ ಆಂತರಿಕ ಯುದ್ದದಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಘರ್ಷ ಪೀಡಿತ ಸುಡಾನ್​ನಲ್ಲಿ ಈವರೆಗೂ 7,500ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net