

ನವದೆಹಲಿ : ಎರಡು ವರ್ಷದಿಂದ 18 ವರ್ಷದವರೆಗಿನ ವಯೋಮಾನದವರಿಗೆ ಕೋವಾಕ್ಸಿನ್ ಕರೊನಾ ಲಸಿಕೆ ನೀಡಬಹುದೇ ಎಂದು ಪರೀಕ್ಷಿಸಲು ಕ್ಲಿನಿಕಲ್ ಟ್ರಯಲ್ಸ್ ನಡೆಸಲು ದೆಹಲಿಯ ಏಮ್ಸ್ ಆಸ್ಪತ್ರೆ ಸಜ್ಜಾಗಿದೆ. ಇದಕ್ಕಾಗಿ ಟ್ರಯಲ್ನಲ್ಲಿ ಭಾಗವಹಿಸಲಿರುವ ಮಕ್ಕಳ ಸ್ಕ್ರೀನಿಂಗ್ಅನ್ನು ಇಂದು ಆರಂಭಿಸಲಾಯಿತು.
ಅಭ್ಯರ್ಥಿಗಳಿಗೆ ಕರೊನಾ ಸೋಂಕು ಪತ್ತೆ ಹಚ್ಚುವ ಆರ್ಟಿಪಿಸಿಆರ್ ಟೆಸ್ಟ್ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಸ್ಕ್ರೀನಿಂಗ್ ರಿಪೋರ್ಟ್ ಬಂದ ಬಳಿಕ ಕೋವಾಕ್ಸಿನ್ ಲಸಿಕೆ ನೀಡಲಾಗುವುದು. ಮೊದಲ ಡೋಸ್ ನೀಡಿದ ನಂತರ 28 ದಿನಗಳ ಅಂತರ ನೀಡಿ ಎರಡನೇ ಡೋಸ್ ನೀಡಲಾಗುವುದು.
ಭಾರತ್ ಬಯೋಟೆಕ್ನ ಕೋವಾಕ್ಸಿನ್ ಟ್ರಯಲ್ಸ್ಅನ್ನು 525 ಆರೋಗ್ಯವಂತ ವಾಲಂಟಿಯರ್ಗಳ ಮೇಲೆ ನಡೆಸಬೇಕಿದೆ. ಈಗಾಗಲೇ ಪಟ್ನಾ ಏಮ್ಸ್ನಲ್ಲೂ ಈ ಟ್ರಯಲ್ಸ್ ಆರಂಭವಾಗಿದೆ. (ಏಜೆನ್ಸೀಸ್)