ಖುಷ್ಬೂ ಬಿಜೆಪಿ ಸೇರ್ಪಡೆಯಾದರೆ ಎಐಎಡಿಎಂಕೆ ನಾಯಕರಲ್ಲೇಕೆ ಖುಷಿ ಸಂಭ್ರಮ?

ravi-khushboo
Published on

ಚೆನ್ನೈ: ಚಿತ್ರನಟಿ, ರಾಜಕಾರಣಿ ಖುಷ್ಬೂ ಸುಂದರ್ ಸೋಮವಾರ ನವದೆಹಲಿಯಲ್ಲಿ ಬಿಜೆಪಿ ಸೇಪರ್ಡೆಯಾದ ಬೆನ್ನಿಗೆ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ನಾಯಕರಲ್ಲಿ ಸಂಭ್ರಮ ಮೂಡಿರುವುದು ಕಂಡು ಅನೇಕರಿಗೆ ಅಚ್ಚರಿ. ಯಾಕೆ ಇಂಥಾ ಸಂಭ್ರಮ? ಎಂಬ ಕುತೂಹಲ!

ಮೀನುಗಾರಿಕೆ ಸಚಿವರೂ ಆಗಿರುವ ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದೊಂದು ಶುಭ ಸುದ್ದಿ. ಖುಷ್ಬೂ ನಮ್ಮ ಮಿತ್ರ ಪಕ್ಷ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದೊಂದು ಉತ್ತಮ ನಡೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದೊಂದಿಗಿನ ಆರು ವರ್ಷದ ಯಾತ್ರೆಯನ್ನು ಖುಷ್ಬೂ ಕೊನೆಗೊಳಿಸಿ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಎಲ್​. ಮುರುಗನ್​ ಕೂಡ ಹಾಜರಿದ್ದರು. ರಾಜ್ಯದಲ್ಲಿ ಈ ಸಲದ ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ನಾಯಕರಾಗಿ ಕೆ.ಪಳನಿಸಾಮಿ ಅವರನ್ನು ನೇಮಕ ಮಾಡಿರುವುದನ್ನು ಮಿತ್ರಪಕ್ಷವಾಗಿ ಬಿಜೆಪಿ ಕೂಡ ಈ ಹಿಂದೆಯೇ ಸ್ವಾಗತಿಸಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net